Khanapur

ಐತಿಹಾಸಿಕ ನಂದಗಡದಲ್ಲಿ ಜಿಲ್ಲಾ ಮಟ್ಟದ ಥ್ರೋಬಾಲ್ ಸ್ಪರ್ಧೆ: ಕ್ರೀಡಾಪಟುಗಳಿಂದ ಅತ್ಯುತ್ಸಾಹದ ಪ್ರದರ್ಶನ

Share

ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದ ಮಹಾತ್ಮ ಗಾಂಧಿ ಪಿಯು ಕಾಲೇಜಿನಲ್ಲಿ, ಜಿಲ್ಲಾ ಮಟ್ಟದ ತ್ರೋಬಾಲ್ ಸ್ಪರ್ಧೆಯು ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಜರುಗಿತು. ವಿವಿಧ ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಕ್ರೀಡಾಪ್ರತಿಭೆಯನ್ನು ಮೆರೆದ ಪ್ರದರ್ಶಿಸಿದರು.

ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದ ಮಹಾತ್ಮ ಗಾಂಧಿ ಪಿಯು ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ತ್ರೋಬಾಲ್ ಸ್ಪರ್ಧೆ ಅತಿ ಉತ್ಸಾಹದಿಂದ ಜರುಗಿತು. ಕಾಲೇಜಿನ ಪ್ರಾಂಶುಪಾಲರಾದ ಎಮ್.ಕೆ.ಭಜಂತ್ರಿ ಸ್ವಾಗತ ಕೋರಿದರು. ಮಾಜಿ ಶಾಸಕ ಹಾಗೂ ಎನ್.ಆರ್.ಇ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ಬಸಪ್ಪಣ್ಣ ಅರಗಾವಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಕ್ರೀಡಾ ಶಿಕ್ಷಕರಿಗೆ ಟೋಪಿ ಮತ್ತು ಜರಕೀನ್ ವಿತರಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಪಾರಿವಾಳಗಳನ್ನು ಹಾರಿಸುವ ಮೂಲಕ ಹಾಗೂ ಕ್ರೀಡಾ ಜ್ಯೋತಿ ಬೆಳಗಿ ಸ್ಪರ್ಧೆಗೆ ಅಧಿಕೃತ ಚಾಲನೆ ನೀಡಲಾಯಿತು. ಇದೇ ವೇಳೆ ಜೂಡೋ ಸ್ಪರ್ಧೆಯಲ್ಲಿ ನ್ಯಾಷನಲ್ ಮಟ್ಟದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಕುಮಾರಿ ಸರೀತಾ ಅವರನ್ನು ಸತ್ಕರಿಸಲಾಯಿತು. ಸ್ಪರ್ಧೆಯ ಹುಡುಗರ ವಿಭಾಗದಲ್ಲಿ ಕಿತ್ತೂರು ತಾಲೂಕಿನ ನೇಸರಗಿ ಸರ್ಕಾರಿ ಪಿಯು ಕಾಲೇಜು ಪ್ರಥಮ ಹಾಗೂ ಖಾನಾಪೂರು ಸರ್ಕಾರಿ ಪಿಯು ಕಾಲೇಜು ದ್ವಿತೀಯ ಸ್ಥಾನ ಪಡೆದರೆ, ಹುಡುಗಿಯರ ವಿಭಾಗದಲ್ಲಿ ಖಾನಾಪೂರು ಸರ್ಕಾರಿ ಪಿಯು ಕಾಲೇಜು ಪ್ರಥಮ ಹಾಗೂ ಬೆಳಗಾವಿಯ ಜ್ಯೋತಿ ಪಿಯು ಕಾಲೇಜು ದ್ವಿತೀಯ ಸ್ಥಾನ ಪಡೆದವು. ಪಿಯು ಡಿಡಿಪಿಐ ಎಮ್.ಎಂ. ಕಾಂಬಳೆ, ಜಿಲ್ಲಾ ಸಂಯೋಜಕ ಪ್ರಭು ಸೇರಿದಂತೆ ಅನೇಕ ಗಣ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.

Tags:

error: Content is protected !!