State

ಬಿಜೆಪಿಗರು ಅಭಿವೃದ್ಧಿ ವಿರೋಧಿಗಳು….

Share

ಬಿಜೆಪಿಗರು ಅಭಿವೃದ್ಧಿ ವಿರೋಧಿಗಳು. ಬೆಂಗಳೂರಿಗೆ ಏನಾದರೂ ಶಾಪ ಇದ್ರೆ ಅದಕ್ಕೆ ಕಾರಣ ಬಿಜೆಪಿ. ಅವರು ಬೆಂಗಳೂರಿಗೆ ಅಂತ ಏನಾದರೂ ಮಾಡಿದ್ದಾರಾ?. ಒಂದು ಯೋಜನೆ ಮಾಡಿದ್ದಾರಾ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಉದ್ಯಾನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ ಹಿಂಪಡೆದಿರುವ ವಿಚಾರವಾಗಿ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಅಭಿವೃದ್ಧಿ ವಿರೋಧಿಗಳು ಬಿಜೆಪಿ. ಬೆಂಗಳೂರಿಗೆ ಏನಾದರೂ ಶಾಪ ಇದ್ರೆ ಅದಕ್ಕೆ ಕಾರಣ ಬಿಜೆಪಿ. ಅವರು ಬೆಂಗಳೂರಿಗೆ ಅಂತ ಏನಾದರೂ ಮಾಡಿದ್ದಾರಾ?. ಒಂದು ಯೋಜನೆ ಮಾಡಿದ್ದಾರಾ. ಆರ್.ಅಶೋಕ್, ಹೆಚ್ ಡಿ.ಕುಮಾರಸ್ವಾಮಿ, ವಿಜಯೇಂದ್ರ ಉಪಯೋಗಿಸೋ ಪದ, ನಾನು ಉಪಯೋಗಿಸೋಕೆ ಇಷ್ಟಪಡಲ್ಲ. ನಾನು ಈ ಸ್ಥಾನದಲ್ಲಿದ್ದೇನೆ. ಮುಖ್ಯಮಂತ್ರಿ ಸ್ಥಾನ ಇದೆ. ಈ ಸ್ಥಾನಕ್ಕೆ ಗೌರವ ನೀಡಬೇಕು. ನಾನು ನಮ್ರತೆಯಿಂದ ಕೇಳಿಕೊಳ್ಳುತ್ತಿದ್ದೇನೆ. ನಾಲಗೆ ಮೇಲೆ ಹತೋಟಿ ಇಟ್ಟುಕೊಳ್ಳಿ. ನೀವು ಈ ಸ್ಥಾನದಲ್ಲಿ ಇದ್ದವರು, ನಿಮ್ಮ ತಂದೆ ಅವರು ಈ ಸ್ಥಾನದಲ್ಲಿ ಇದ್ದವರು ಎಂದು ವಾಗ್ದಾಳಿ ನಡೆಸಿದರು.

ಮಸೂದೆ ವಿಚಾರವಾಗಿ ಯೂಟರ್ನ್ ಶಿವಕುಮಾರ್ ಅಂತ ಏನೇನೋ ಹೇಳಿದ್ದಾರೆ. ನಾನು ಯಾಕೆ ಯೂಟರ್ನ್ ಆಗಲಿ. ಅಧಿವೇಶನದಲ್ಲಿ ಅವರು ಚರ್ಚೆ ಮಾಡಲಿಲ್ಲ. ಹಿಂದೆ ಮಾಜಿ ಸಿಎಂ ಕಾಲದಲ್ಲಿ ಏನೇನು ಆಗಿದೆ ಅಂತ ಪಟ್ಟಿ ಬಿಡುಗಡೆ ಮಾಡುತ್ತೇನೆ. ನಾನು ಚರ್ಚೆ ಆಗಲಿ ಅಂತ ಇದ್ದೆ. ಪಾರ್ಕ್ ವಿಚಾರ ದಲ್ಲಿ ಚರ್ಚೆ ಮಾಡಬೇಕಿತ್ತು. ಯಾರಾದರೂ ಪಾರ್ಕ್ ಮಾರೋಕೆ ಆಗುತ್ತಾ?. ನನಗೆ ದೇವರು ಜ್ಞಾನ ಕೊಟ್ಟಿದ್ದಾರೆ ಎಂದರು. ನಮ್ಮ ಊರಲ್ಲಿ ಬರದ ಬಗ್ಗೆ ಚರ್ಚೆ ಮಾಡೋಕೆ ಅಂತ ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಕೇಳಿಕೊಂಡಿದ್ದಾರೆ. ಅದಕ್ಕಾಗಿ ನಾವು ವಿಶೇಷ ಅಧಿವೇಶನ ಕರೆದಿದ್ದೇವೆ. ಎಷ್ಟು ಸಾವಿರ ಹಳ್ಳಿಗಳಿಗೆ ಎಫೆಕ್ಟ್ ಆಗುತ್ತಿದೆ ಎಂದು ಚರ್ಚೆ ಮಾಡುತ್ತಿದ್ದೇವೆ. ಅದಕ್ಕಾಗಿ ಚರ್ಚೆ ಮಾಡೋಕೆ ವಿಶೇಷ ಅಧಿವೇಶನ ಮಾಡುತ್ತಿದ್ದೇವೆ. ನಾವು ಬರದ, ರೈತರ ಬಗ್ಗೆ ಮಾತ್ರ ಚರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರಕ್ಕೆ ನಾವು ವರದಿ ಕೊಡಬೇಕು. ಸಲಹೆ ಇದ್ದರೆ ಕೊಡಲಿ, ನಾನೂ ಸ್ವಾಗತ ಮಾಡುತ್ತೇವೆ. ಈಗ ವಿಸ್ತರಣೆ ಮಾಡಿ ಎಂದು ಹೇಳುತ್ತಿದ್ದಾರೆ, ನೋಡೋಣ ಎಂದರು.

ಬರದ ಬಗ್ಗೆ ಪ್ರವಾಸ ವಿಚಾರವಾಗಿ ಮಾತನಾಡಿ, ನಾಳೆ ವಿಜಯನಗರ, ಇಂದು ಬಾಗಲಕೋಟೆ ಬರ ಅಧ್ಯಯನಕ್ಕೆ ಹೋಗ್ತಾ ಇದ್ದೇನೆ. ಎಲ್ಲಾ ಕಡೆ ಹೋಗಿ ನೋಡುತ್ತಿದ್ದೇನೆ. ಕ್ಯಾಬಿನೆಟ್ನಲ್ಲಿ ಮಿನಿಸ್ಟರ್ಗೆ ಕೇಳಿದ್ದೇನೆ. ಬಿಜೆಪಿ ದಳದ ಶಾಸಕರಿಗೆ ಬರದ ಬಗ್ಗೆ ಚರ್ಚೆ ಮಾಡೋಕೆ ಇಷ್ಟ ಇಲ್ಲ. ಅವಕಾಶ ಸಿಕ್ಕಿಲ್ಲ. ಅದಕ್ಕಾಗಿ ನಾನು ಸ್ಪೆಷಲ್ ಕ್ಯಾಬಿನೆಟ್ ಕರೆದಿದ್ದೇನೆ.‌ ಬರದ ಬಗ್ಗೆ ಚರ್ಚೆ ಮಾಡಬೇಕು. ಪ್ರತ್ಯೇಕವಾಗಿ ಅವರ ಕ್ಷೇತ್ರದ ಸಮಸ್ಯೆ ಕೇಳಬೇಕು. ನಾನು ಅವರಿಗೆ ಸಹಾಯ ಮಾಡಬೇಕು. ಕೇಂದ್ರದವರು ಅನುದಾನ ಕೊಡಬೇಕು. ಸರ್ವ ಪಕ್ಷ ನಿಯೋಗ ಕರೆದೊಯ್ಯಬೇಕು ಎಂದು ತಿಳಿಸಿದರು.ವಿಜಯೇಂದ್ರ ಅವರು ಸಾಲ ಮನ್ನಾ ಮಾಡಬೇಕು ಅಂತ ಹೇಳಿದ್ದಾರೆ, ಖಂಡಿತ. ಈ ಜವಾಬ್ದಾರಿ ತೆಗೆದುಕೊಳ್ಳಬೇಕು. ಅದಕ್ಕಾಗಿ ಬಿಜೆಪಿ ನಾಯಕರು ನನ್ನ ಜೊತೆ ಬರಬೇಕು. ಕೇಂದ್ರಕ್ಕೆ ನಾವೆಲ್ಲಾ ಹೋಗಿ ಕೇಳಬೇಕು. ಸಾಲ ಮನ್ನಾ ಮಾಡಿ ಎಂದು ಕೇಳೋಣ ಎಂದರು.

ಮತ್ತೊಂದು ವಿಕೆಟ್ ಪತನ ಆಗುತ್ತದೆ ಎಂಬ ವಿರೋಧ ಪಕ್ಷದ ಪಟ್ಟಿನ ವಿಚಾರವಾಗಿ ಮಾತನಾಡಿ, ಅವರು ಏನೂ ಬೇಕಾದರೂ ಮಾಡಲಿ. ನನ್ನನ್ನೇ ಪತನ ಮಾಡುತ್ತೇವೆ ಎನ್ನುತ್ತಾರೆ, ಸಂತೋಷ. ಯಾರೇ ತಪ್ಪು ಮಾಡಿದರೂ ಶಿಕ್ಷೇ ಆಗಬೇಕು. ಯಾರೋ ಪ್ರಾಸಿಕ್ಯೂಷನ್ ಬಗ್ಗೆ ಮಾತಾಡುತ್ತಾರೆ. ನನ್ನ ಬಳಿ ಫೈಲ್ ಬಂದಿದೆ. ನಾಗೇಂದ್ರ, ರೇಣುಕಾಚಾರ್ಯ ಫೈಲ್ ಬಂದಿದೆ. ಇನ್ನೂ ಕಣ್ಣು ಬಿಟ್ಟು ನೋಡಿ, ಪರಿಶೀಲನೆ ಮಾಡಬೇಕು. ಲೀಗಲ್ ನೋಡಬೇಕು, ಸಾರಾಂಶ ನೋಡಬೇಕು ಎಂದು ಹೇಳಿದರು.

Tags:

error: Content is protected !!