ಪಾಲಿಕೆಯ ವಾರ್ಡ್ 35ರ ವ್ಯಾಪ್ತಿಯ ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿಯ ಶಿವಾಲಯದ ಆವರಣದಲ್ಲಿ ಸಮುದಾಯ ಭವನ ನವೀಕರಣ ಕಾಮಗಾರಿಗೆ ಉಪಮಹಾಪೌರ ಹಣಮಂತ ಕೊಂಗಾಲಿ ಭೂಮಿ ಪೂಜೆ ನೆರವೇರಿಸಿದರು.

ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ರೂ.5 ಲಕ್ಷ ಅನುದಾನದಲ್ಲಿ ಈ ನವೀಕರಣ ಕಾಮಗಾರಿ ನಡೆಯಲಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ, ವಾರ್ಡ್ 35ರ ನಗರ ಸೇವಕಿ ಲಕ್ಷ್ಮೀ ರಾಠೋಡ್,
ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ, ಶಿವಾಂಜನೇಯ ಸೇವಾ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವ ರಾಠೋಡ, ವಿಜಯಾ ಆರ್ಥೊ ಮತ್ತು ಟ್ರಾಮಾ ಸೆಂಟರ್ ನಿರ್ದೇಶಕ ಡಾ.ರವಿ ಪಾಟೀಲ, ವಿಜಯಾ ಹಿರೇಮಠ, ವಿರುಪಾಕ್ಷ, ಪ್ರಸಾದ ಸೇರಿದಂತೆ ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿ, ಹಿರಿಯ ನಾಗರಿಕರ ವೇದಿಕೆ ಹಾಗೂ ಅಕ್ಕನ ಬಳಗದ ಪದಾಧಿಕಾರಿಗಳು ಬಡಾವಣೆಯ ನಾಗರಿಕರು
ಉಪಸ್ಥಿತರಿದ್ದರು.
