Belagavi

ಬೆಳಗಾವಿ: ಧರ್ಮವೀರ ಸಂಭಾಜೀ ಮಹಾರಾಜ್ ಚೌಕ್‌ನಲ್ಲಿ ಗಣೇಶ ಮಂಡಟಕ್ಕೆ ಅಡ್ಡಿಯಾಗಿದ್ದ ಎಲ್ಇಡಿ ಸ್ಕ್ರೀನ್ ತೆರವು

Share

ಬೆಳಗಾವಿಯ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ಚೌಕ್‌ನಲ್ಲಿ ಗಣೇಶ ಮಂಟಪದ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಎಲ್ಇಡಿ ಸ್ಕ್ರೀನ್ ತೆರವಿಗೆ ಸ್ಥಳೀಯ ಮಂಡಳಿಗಳು ನಡೆಸಿದ ನಿರಂತರ ಪ್ರತಿರೋಧಕ್ಕೆ ಅಂತಿಮವಾಗಿ ಯಶಸ್ಸು ಸಿಕ್ಕಿದೆ. ಮಧ್ಯವರ್ತಿ ಮಹಾಮಂಡಳದ ಮಧ್ಯಸ್ಥಿಕೆ ಹಾಗೂ ಸ್ಥಳೀಯರ ಸಹಕಾರದಿಂದ ವಿವಾದಿತ ಪರದೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದ್ದು, ಹಬ್ಬದ ಸಂಭ್ರಮಕ್ಕೆ ಎದುರಾಗಿದ್ದ ಆತಂಕ ದೂರವಾಗಿದೆ.

ಬೆಳಗಾವಿಯ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ಚೌಕ್‌ನಲ್ಲಿ ಶ್ರೀ ದತ್ತ ಮಂದಿರದ ಬಳಿ ಗಣೇಶೋತ್ಸವ ಮಂಡಟಕ್ಕೆ ಅಡ್ಡವಾಗಿ ಅಳವಡಿಸಲಾಗಿದ್ದ ಎಲ್ಇಡಿ ಸ್ಕ್ರೀನ್‌ನಿಂದ ಸ್ಥಳೀಯ ಮಂಡಳಿಗಳಿಗೆ ಉಂಟಾಗಿದ್ದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಮಧ್ಯವರ್ತಿ ಗಣೇಶೋತ್ಸವ ಮಹಾಮಂಡಳದ ಪದಾಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಸಂಯೋಜಿತ ಮಾತುಕತೆ ನಡೆಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆರಂಭದಲ್ಲಿ ಸ್ಥಳೀಯ ಗಣೇಶ ಮಂಡಳಿಯ ತೀವ್ರ ವಿರೋಧದ ನಡುವೆಯೂ ಅಳವಡಿಸಲಾಗಿದ್ದ ಈ ಪರದೆಯನ್ನು, ಮಂಡಳಿಯ ಮುಖಂಡರು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮನೊಲಿಸಿದ ಪರಿಣಾಮವಾಗಿ ಇದೀಗ ಅಲ್ಲಿಂದ ಸಂಪೂರ್ಣವಾಗಿ ತೆರವುಗೊಳಿಸಿ ಅನ್ಯ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಯಶಸ್ವಿಯಾಗಿ ಆರಂಭಗೊಂಡಿದೆ.

Tags:

error: Content is protected !!