State

ಸೆಪ್ಟೆಂಬರ್ 10 ರಂದು ಅಪೆಕ್ಸ್ ಬ್ಯಾಂಕ್ ಚುನಾವಣೆ: ಅವಿರೋಧ ಆಯ್ಕೆಗೆ ಒಮ್ಮತದ ತೀರ್ಮಾನ; ಸಹಕಾರ ಸಚಿವ ಲಕ್ಷ್ಮಣ್ ಸವದಿ

Share

ಅಪೆಕ್ಸ್ ಬ್ಯಾಂಕ್ ಹಾಗೂ ಕೆ.ಎಂ.ಎಫ್ ಅಧ್ಯಕ್ಷರ ಚುನಾವಣಾ ರಣಕಹಳೆ ಮೊಳಗಿದ್ದು, ಯಾವುದೇ ಚುನಾವಣೆ ನಡೆಸದೆ ಒಮ್ಮತದ ಮೂಲಕವೇ ಎಲ್ಲರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ಇಲಾಖೆ ಸಜ್ಜಾಗಿದೆ ಎಂದು ಸಿಎಂ ಭೇಟಿ ಬಳಿಕ ಸಚಿವ ಲಕ್ಷ್ಮಣ್ ಸವದಿ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಹಕಾರ ಸಚಿವ ಲಕ್ಷ್ಮಣ್ ಸವದಿ, ಮುಂಬರುವ ಸೆಪ್ಟೆಂಬರ್ 10 ರಂದು ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸಹಕಾರಿ ಯೂನಿಯನ್’ಗೆ ದೇವೇಗೌಡರನ್ನು ಅಧ್ಯಕ್ಷರನ್ನಾಗಿ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಯಾಗಿದ್ದು, ಸೆಪ್ಟೆಂಬರ್ 9 ರಂದು ಒಮ್ಮತದ ಅಭಿಪ್ರಾಯ ಪಡೆದು ಎಲ್ಲರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೂರು ನಿರ್ದೇಶಕ ಸ್ಥಾನಗಳಿಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವ್ಯಾಜ್ಯವಿದ್ದು, ಕೆ.ಎನ್. ರಾಜಣ್ಣ ಅವರ ಮರು ಆಯ್ಕೆ ಕುರಿತು ಎಲ್ಲರ ಅಭಿಪ್ರಾಯ ಪಡೆದು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಪ್ರಕ್ರಿಯೆ ನಡೆಸಲಾಗುವುದು ಎಂದರು. ಮುಂದುವರಿದು ಮಾತನಾಡಿದ ಅವರು, ಕೆ.ಎಂ.ಎಫ್ ಅಧ್ಯಕ್ಷರ ಆಯ್ಕೆಯು ಕೂಡ ಶೀಘ್ರದಲ್ಲೇ ನಡೆಯಲಿದ್ದು, ಯಾವುದೇ ಚುನಾವಣೆಗೆ ಅವಕಾಶ ನೀಡದೆ ಒಮ್ಮತದ ನಿರ್ಧಾರದ ಮೂಲಕವೇ ಅವಿರೋಧ ಆಯ್ಕೆ ಮಾಡಲಾಗುವುದು ಎಂದು ವಿವರಿಸಿದರು.

Tags:

error: Content is protected !!