bagalkot

ನಿಮಗೆ ಎಲ್ಲಿಂದ ಹಣ ಬರುತ್ತಿದೆ? ನೀವು ಬೆವರು ಸುರಿಸಿ ಸಂಪಾದಿಸಿದ್ದಾ?

Share

ಆರ್‌ಎಸ್‌ಎಸ್ ಸಂಘಟನೆಗೆ ವಿದೇಶದಿಂದ ಅಕ್ರಮ ಹಣ ಹರಿದುಬರುತ್ತಿದೆ ಎಂಬ ಸಚಿವ ಕಾಶಪ್ಪನವರ್ ಆರೋಪಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುಳೇದಗುಡ್ಡದಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಬಿಡದಿ ಟೌನ್‌ಶಿಪ್‌ನಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿರುವ ಸಿಎಂ ಹೇಳಿಕೆಯನ್ನು ತೀವ್ರವಾಗಿ ಪ್ರಶ್ನಿಸಿರುವ ಅವರು, ಸರ್ಕಾರದ ನಡೆ ಹಾಗೂ ಬದ್ಧತೆಯನ್ನು ತೀವ್ರವಾಗಿ ತೊಳೆಯುವ ಕೆಲಸ ಮಾಡಿದ್ದಾರೆ.

ಆರ್‌ಎಸ್‌ಎಸ್ ಮೇಲಿನ ವಿದೇಶಿ ದೇಣಿಗೆ ಆರೋಪಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, “ನಿಮಗೆ ಎಲ್ಲಿಂದ ಹಣ ಬರುತ್ತಿದೆ? ನೀವು ಸಂಪಾದಿಸುತ್ತಿರುವ ಹಣ ನಿಮ್ಮ ಬೆವರು ಸುರಿಸಿ ದುಡಿದಿದ್ದಾ?” ಎಂದು ರಾಜ್ಯ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್‌ಗೆ ಕಳ್ಳ ದುಡ್ಡು ಬಂದಿದೆಯೋ ಇಲ್ಲವೋ ಎಂಬುದರ ಬಗ್ಗೆ ಸರ್ಕಾರ ತನಿಖೆ ನಡೆಸಲಿ, ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ ಎಂದ ಹೆಚ್‌ಡಿಕೆ, “ಮೊದಲು ನಿಮ್ಮ ಸ್ಥಾನಮಾನ ಎಲ್ಲಿದೆ ಎಂಬುದನ್ನು ನೀವು ನೋಡಿಕೊಳ್ಳಿ” ಎಂದು ಸಚಿವ ಕಾಶಪ್ಪನವರ್ ಹೇಳಿಕೆಗೆ ಗುಳೇದಗುಡ್ಡದಲ್ಲಿ ತಿರುಗೇಟು ನೀಡಿದರು.

ಇನ್ನು ಬಿಡದಿ ಟೌನ್‌ಶಿಪ್‌ನಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂಬ ಸಿಎಂ ಹೇಳಿಕೆ ವಿರುದ್ಧ ಕಿಡಿಕಾರಿದ ಹೆಚ್‌ಡಿಕೆ, ಬಿಡದಿಯಲ್ಲಿ ರೈತರು ಭೂಮಿ ನೀಡಲು ಸಿದ್ಧರಿಲ್ಲ, ನಾವು ಸಂಪೂರ್ಣವಾಗಿ ರೈತರ ಪರವಾಗಿ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದರು. 2018ರಲ್ಲಿ ತಾವೇ ಮನೆ ಬಾಗಿಲಿಗೆ ಬಂದು ಸಿಎಂ ಮಾಡಿ, 14 ತಿಂಗಳಲ್ಲೇ ಖಾಲಿ ಮಾಡಿಸಿದ ಘಟನೆಯನ್ನು ಸ್ಮರಿಸಿದ ಅವರು, ತಮ್ಮ ಅವಧಿಯಲ್ಲಿ ಕಲಬುರಗಿ, ಬೀದರ್, ಕೊಪ್ಪಳ ಭಾಗಕ್ಕೆ ಘೋಷಿಸಿದ್ದ 9 ಇಂಡಸ್ಟ್ರಿಯಲ್ ಕ್ಲಸ್ಟರ್‌ಗಳನ್ನು ಈ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ನಿಜವಾಗಿಯೂ ಉದ್ಯೋಗ ಸೃಷ್ಟಿಸಿದ್ದರೆ ರಾಯಚೂರು, ಬಾಗಲಕೋಟೆ ಹಾಗೂ ಕೊಪ್ಪಳ ಭಾಗದ ರೈತರು ಮತ್ತು ಕಾರ್ಮಿಕರು ಇಂದಿಗೂ ಗುಳೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಟೀಕಿಸಿದರು.

Tags:

error: Content is protected !!