Belagavi

ಯರಗಟ್ಟಿ ಬರ ಪೀಡಿತ ಪ್ರದೇಶಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ

Share

ಒಂದೆಡೆ ಸುರಿಯುತ್ತಿರುವ ಮಳೆಯ ಮಧ್ಯೆಯೂ ಬೆಳಗಾವಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ನಿಗದಿತ ಪ್ರಮಾಣದ ಮಳೆಯಾಗದೇ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಯರಗಟ್ಟಿ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೈತರ ಸಂಕಷ್ಟಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಒಂದು ಕಡೆ ಮಳೆ ಬಂದ್ರೆ ಇನ್ನೊಂದು ಕಡೆ ನಿಗದಿತ ಪ್ರಮಾಣದ ಮಳೆ ಆಗದೆ ಬರದ ಪರಿಸ್ಥಿತಿ ಎದುರಾಗಿದ್ದು ಇಂದು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಬರದ ತೀವ್ರತೆಯನ್ನು ರೈತರು ಬಿಚ್ಚಿಟ್ಟಿದ್ದು ತಮ್ಮ ಸಂಕಷ್ಟವನ್ನ ತೋಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕುರಬಗಟ್ಟಿ,ಯಳಝರ್ವಿ ಗ್ರಾಮಗಳಲ್ಲಿ ಕಂಡುಬಂತುಈ ವೇಳೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರೈತರ ಸಂಕಷ್ಟಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಭರವಸೆಯನ್ನು ನೀಡಿದರಲ್ಲದೆ ಸರ್ಕಾರಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರಿಗೆ ಸೂಚನೆಯನ್ನೂ ನೀಡಿದರು

ಈ ವೇಳೆ ಕಳೆದ ಎರಡು ತಿಂಗಳಿನಿಂದ ಮಳೆ ಇಲ್ಲದೆ ಬೆಳೆ ಹಾನಿ ಯಾಗಿದ್ದು
ಶೇಂಗಾ, ಉದ್ದು, ಮೆಕ್ಕೆಜೋಳ,ಹೆಸರು ಬೆಳೆ ಸೇರಿದಂತೆ ಇತರ ಬೆಳೆಗಳ ಹಾನಿಯನ್ನ ಸಚಿವರಿಗೆ ವಿವರಿಸಿದ ರೈತರು ಸದ್ಯ ಆಗಿರುವ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡಲು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಯರಗಟ್ಟಿ, ರಾಮದುರ್ಗ, ಸವದತ್ತಿ ತಾಲ್ಲೂಕಿನಲ್ಲಿ ಬರದ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ ಜಿಲ್ಲೆಯ ಯರಗಟ್ಟಿ,ರಾಮದುರ್ಗ,ಸವದತ್ತಿ ತಾಲ್ಲೂಕುಗಳಲ್ಲಿ ಶೇಕಡಾ 40 ರಷ್ಟು ಮಳೆ ಕೊರತೆ ಎದುರಾಗಿದ್ದು ಈಗಾಗಲೆ ಎರಡು ವಾರ ಮಳೆ ಕೈಕೊಟ್ಟಿದೆ. ಇದೊಂದು ವಾರ ಮಳೆ ಬಾರದಿದ್ದರೆ ಬೆಳೆ ಹಾನಿ ಪ್ರಮಾಣ ಹೆಚ್ಚಾಗಲಿದೆ ಎಂದರು

ಒಟ್ಟಾರೆಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ತಾಲೂಕುಗಳಲ್ಲಿ ನಿಗದಿತ ಪ್ರಮಾಣದ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಪರಿಹಾರ ನೀಡುವಂತೆ ರೈತರ ಆಗ್ರಹಗಳು ಕೇಳಿಬಂದಿದ್ದು ಸರ್ಕಾರ ಯಾವ ರೀತಿ ಸ್ಪಂದನೆ ನಿಡಲಿದೆ ಅಂತ ಕಾಯ್ದು ನೋಡಬೇಕಿದೆ.

Tags:

error: Content is protected !!