ರಾಜಧಾನಿ ಬೆಂಗಳೂರಿನ ಲೋಕಭವನದಲ್ಲಿ ಇಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಶಸ್ವಿಯಾಗಿ ನೆರವೇರಿದ್ದು, ಒಟ್ಟು 19 ನೂತನ ಸಚಿವರು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರಾದ ಥಾವರಚಂದ್ ಗೆಹ್ಲೋತ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ರಾಜಧಾನಿ ಬೆಂಗಳೂರಿನ ಲೋಕಭವನದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ 19 ನೂತನ ಸದಸ್ಯರು ಅಧಿಕೃತವಾಗಿ ಸೇರ್ಪಡೆಯಾದರು. ವೇದಿಕೆಯಲ್ಲಿದ್ದ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಡಿಸಿಎಂ ಜಿ. ಪರಮೇಶ್ವರ ಅವರು ನೂತನ ಸಚಿವರಿಗೆ ಶುಭ ಕೋರಿ ಅಭಿನಂದನೆ ಸಲ್ಲಿಸಿದರು. ರಾಜ್ಯಪಾಲರಾದ ಥಾವರಚಂದ್ ಗೆಹ್ಲೋತ್ ಅವರು ಎಲ್ಲ ನೂತನ ಸದಸ್ಯರಿಗೆ ಸತ್ಯನಿಷ್ಠೆಯ ಪ್ರಮಾಣ ವಚನ ಬೋಧಿಸಿದರು.



1. ಡಾ. ಅಜಯ್ ಧರ್ಮಸಿಂಗ್ ಅವರು (ದೇವರ ಹೆಸರಿನಲ್ಲಿ)
2. ಎಚ್.ಸಿ. ಬಾಲಕೃಷ್ಣ ಅವರು (ದೇವರ ಹೆಸರಿನಲ್ಲಿ)
3. ಕೆ.ಎಸ್. ಬಸವಂತಪ್ಪ ಅವರು (ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ)
4. ಬಸವರಾಜ್ ರಾಯರೆಡ್ಡಿ ಅವರು
5. ಎನ್. ಚೆಲುವರಾಯಸ್ವಾಮಿ ಅವರು (ದೇವರು ಮತ್ತು ಅಜ್ಜನ ಹೆಸರಿನಲ್ಲಿ)
6. ಲಕ್ಷ್ಮಣ್ ಸವದಿ ಅವರು (ದೇವರ ಹೆಸರಿನಲ್ಲಿ)
7. ಮಧು ಬಂಗಾರಪ್ಪ ಅವರು (ದೇವರ ಹೆಸರಿನಲ್ಲಿ)
8. ಎಸ್.ಎಸ್. ಮಲ್ಲಿಕಾರ್ಜುನ ಅವರು (ದೇವರ ಹೆಸರಿನಲ್ಲಿ)
9. ಡಿ.ನಾಗೇಂದ್ರ ಅವರು (ದೇವರ ಹೆಸರಿನಲ್ಲಿ)
10. ಪಿ.ಎಂ. ನರೇಂದ್ರಸ್ವಾಮೀ ಅವರು (ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಗಂಗಾಧರ ಅಜ್ಜನವರ, ದೇವರ ಹೆಸರಿನಲ್ಲಿ)


11. ಪುಟ್ಟುರಂಗ ಶೆಟ್ಟಿ ಅವರು (ದೇವರ ಹೆಸರಿನಲ್ಲಿ)
12. ಟಿ. ರಘುಮೂರ್ತಿ ಅವರು (ದೇವರ ಹೆಸರಿನಲ್ಲಿ)
13. ರಿಝ್ವಾನ್ ಅರ್ಷದ್ ಅವರು
14. ರುದ್ರಪ್ಪ ಲಮಾಣಿ ಅವರು (ದೇವರ ಹೆಸರಿನಲ್ಲಿ)
15. ಸಂತೋಷ ಲಾಡ್ ಅವರು
16. ಕೆ.ಎಂ.ಶಿವಲಿಂಗೇಗೌಡ ಅವರು (ದೇವರ ಹೆಸರಿನಲ್ಲಿ)
17. ಶಿವರಾಜ್ ತಂಗಡಗಿ ಅವರು (ದೇವರ ಹೆಸರಿನಲ್ಲಿ)
18. ವಿಜಯಾನಂದ ಕಾಶಪ್ಪನವರ ಅವರು (ದೇವರ ಹೆಸರಿನಲ್ಲಿ)
19. ಬಿ.ಜೆಡ್. ಝಮೀರ್ ಅಹ್ಮದ್ ಖಾನ್ ಅವರು (ದೇವರ ಹಾಗೂ ತಾಯಿಯ ಹೆಸರಿನಲ್ಲಿ) ಪ್ರಮಾಣ ವಚನ ಸ್ವೀಕರಿಸಿದರು.
ವಿವಿಧ ನಾಯಕರು ದೇವರು, ಮಹಾಪುರುಷರು, ಹಿರಿಯರು ಹಾಗೂ ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಈ ಸಮಾರಂಭದ ವಿಶೇಷವಾಗಿತ್ತು. ಈ ನೂತನ ಸಚಿವರ ಸೇರ್ಪಡೆಯಿಂದ ರಾಜ್ಯ ಸರ್ಕಾರದ ಆಡಳಿತ ಯಂತ್ರಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದ್ದು, ಶೀಘ್ರದಲ್ಲೇ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.


