ತಾಲೂಕಿನ ಶಮನೇವಾಡಿಯ ಎ.ಜಿ.ಎಮ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಸ್. ಆರ್. ರಂಗನಾಥರ ಜನ್ಮದಿನದ ನಿಮಿತ್ತ 64ನೇಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.


ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಚಾಲಕಿ ಭಾಗ್ಯಶ್ರೀ ಅಲಗೂರೆ –
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಂಡರೇ ಮಾತ್ರ ಭವಿಷ್ಯದಲ್ಲಿ ಜ್ಞಾನವಂತರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಿಂದ ಅಧಿಕೃತವಾಗಿ ಉಲ್ಲೇಖಿಸಿದ ಪುಸ್ತಕಗಳನ್ನು ಬಳಸುವದು ಒಳಿತು. ಪ್ರತಿ ವರ್ಷ ನಮ್ಮ ಗ್ರಂಥಾಲಯದಲ್ಲಿ ಹೊಸ ಪುಸ್ತಕಗಳು, ಇ-ಸಂಪನ್ಮೂಲಗಳನ್ನ ಹೆಚ್ಚಿಸುತ್ತೆವೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಪ್ರಾಚಾರ್ಯರಾದ ಡಾ. ಸಂಜಯ ಅಂಕಲಿ ಮಾತನಾಡಿ-
ಒಳ್ಳೇಯ ಓದುಗಾರ ಮಾತ್ರ ಒಳ್ಳೆಯ ವಾಗ್ಮಿಯಾಗುತ್ತಾನೆ. ಎಲ್ಲಿ ಒಳ್ಳೆಯ ಗ್ರಂಥಾಲಯವಿರುತ್ತದೋ ಅಲ್ಲಿ ಜ್ಞಾನ ಹಾಗೂ ಸಂಶೋಧನೆ ಹೆಚ್ಚುತ್ತದೆ. ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯದ ಸದೂಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಗ್ರಂಥಪಾಲಕರಾದ ಜ್ಞಾನೇಶ್ವರ ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿ ಎಸ್ ಆರ್ ರಂಗನಾಥ ಅವರ ಜೀವನ ಹಾಗೂ ಸಾಧನೆಯನ್ನು ವಿವರಿಸಿದರು.
ಪ್ರಥಮ ವರ್ಷದ ಸಂಯೋಜಕರಾದ ಡಾ. ಸಚೀನ ಮೆಕ್ಕಳಕಿ ಸ್ವಾಗತಿಸಿದರು.
ಸಹಾಯಕ ಗ್ರಂಥಪಾಲಕರಾದ ಸುಪ್ರಿಯಾ ಗೊಳಪ್ಪಗೋಳ ವಂದಿಸಿದರು.
ಡಾ. ಶಶಿಕಾಂತ ವಾಳಕೆ, ಶ್ರೀ. ಕೆ ಆರ್ ಪಾಟೀಲ, ಪ್ರಶಾಂತ ಶೇಡಬಾಳಕರ, ಅಭಿಜಿತ ಅಕಿವಾಟೆ, ಅಶ್ವಿನಿ ಫರಾಳದ, ಸ್ನೇಹಾ ವಾಳಕಿ, ವೈಶ್ಣವ ಶೆಗಳೆ, ಅಶ್ವಿನಿ ಮೊನಾಚಾರ್ಯ, ರಾಣಿ ಸುಟುರೆ, ರವಿ ವಾಳಕೆ, ಮುತ್ತಣ್ಣಾ ಗೊಳಪ್ಪಗೋಳ, ಪಿರಗೌಡಾ ಹುಳಿಕೊಪ್ಪೆ, ಕೈಫ್ ಮುಲ್ಲಾ, ಶ್ವೇತಾ ಹವಾಲ್ದಾರ, ಕಾವೇರಿ ಕಡೆಮಣಿ, ಸ್ವಯಂ ಶಾಮ್, ಕಾಡೆಶ ಕಲಾದಗಿ, ಮಾಧುರಿ ಬೊರಗಾಂವೆ, ಅರುಣಾ ಮಾಳಗೆ, ಪ್ರತಿಭಾ ಖೋತ ಹಾಗೂ ಕಾಲೇಜಿನ ಭೋದಕ-ಭೊದಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
