ಬೆಳಗಾವಿಯ ಕಿಲ್ಲಾ ಫೋರ್ಟ್ ರಸ್ತೆಯಲ್ಲಿ ಭಟ್ಕ ಜಾನುವಾರುಗಳು ರಸ್ತೆ ಮಧ್ಯೆ ನೇರ ವಾಸ್ತವ ಹೂಡಿರುವುದರಿಂದ ತೀವ್ರ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ತಾವೇ ಮುಂದಾಗಿ ಜಾನುವಾರುಗಳನ್ನು ಪಕ್ಕಕ್ಕೆ ಸರಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ.
ಬೆಳಗಾವಿಯ ಕಿಲ್ಲಾ ಫೋರ್ಟ್ ರಸ್ತೆಯಲ್ಲಿ ಜಾನುವಾರುಗಳು ರಸ್ತೆಯ ಮೇಲೆ ನಿಲ್ಲುತ್ತಿರುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಭಾರೀ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ಈ ರಸ್ತೆಯಲ್ಲಿ ಜಾನುವಾರುಗಳ ಹಾವಳಿಯಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದ್ದು, ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿದು ಕೂಡಲೇ ಎಚ್ಚೆತ್ತ ಕರ್ತವ್ಯನಿರತ ಟ್ರಾಫಿಕ್ ಪೊಲೀಸರು, ಸ್ಥಳಕ್ಕೆ ಆಗಮಿಸಿ ರಸ್ತೆ ಮಧ್ಯೆ ಇದ್ದ ಜಾನುವಾರುಗಳನ್ನು ರಸ್ತೆಯ ಬದಿಗೆ ಅಟ್ಟುವ ಮೂಲಕ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ವಾಹನ ಸವಾರರಿಗೆ ನಿರಾಳತೆ ಕಲ್ಪಿಸಿದ್ದಾರೆ.

