gokak

ಗೋಕಾಕ್‌ನಲ್ಲಿ ನೀರಿನಲ್ಲಿ ಮುಳುಗಿ ಯುವಕ ಸಾವು…

Share

ಪ್ರಕೃತಿ ಸೌಂದರ್ಯ ಸವಿಯಲು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧೃತಿಗೆಡಿಸುವ ಘಟನೆ ಗೋಕಾಕ್‌ನಲ್ಲಿ ಸಂಭವಿಸಿದೆ. ತಡರಾತ್ರಿ ಕಾರ್ಯಾಚರಣೆ ನಡೆಸಿದ ಬೆಳಗಾವಿಯ ಸಮಾಜ ಸೇವಕರ ತಂಡ, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಯುವಕನ ಶವವನ್ನು ಹೊರತೆಗೆದಿದ್ದಾರೆ.

ಗೋಕಾಕ್‌ನಲ್ಲಿ ನಿನ್ನೆ ಸಂಜೆ ತೆರಳಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಬೆಳಗಾವಿಯ ಸಮಾಜ ಸೇವಕರಾದ ಅವಧೂತ್ ತುಡವೇಕರ್, ಪದ್ಮಪ್ರಸಾದ್ ಹೂಲಿ, ನಿಲೇಶ್ ಹಿರೇಹೊಳಿ ಮತ್ತು ಮೈಕೆಲ್ ಪಿಂಟೊ ಅವರನ್ನೊಳಗೊಂಡ ತಂಡವು ತಡರಾತ್ರಿಯೇ ಸ್ಥಳಕ್ಕೆ ಧಾವಿಸಿದೆ. ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಮತ್ತು ಗೋಕಾಕ್ ಅಗ್ನಿಶಾಮಕ ದಳದೊಂದಿಗೆ ಜಂಟಿಯಾಗಿ ಕಠಿಣ ಕಾರ್ಯಾಚರಣೆ ನಡೆಸಿ ಯುವಕನ ಮೃತದೇಹವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಮುಳುಗುತ್ತಿದ್ದ ಯುವಕನನ್ನು ಉಳಿಸಲು ಹಾಗೂ ಮೃತದೇಹ ಪತ್ತೆಹಚ್ಚಲು ತೋರಿದ ಶ್ಲಾಘನೀಯ ಸಾಹಸವನ್ನು ಸ್ಥಳೀಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ದುರಂತದ ಬೆನ್ನಲ್ಲೇ ಸಮಾಜ ಸೇವಕರು ಮತ್ತು ರಕ್ಷಣಾ ಪಡೆಗಳು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕಳಕಳಿಯ ಮನವಿ ಮಾಡಿವೆ. ಜಲಪಾತ ಹಾಗೂ ನದಿ ತೀರಗಳಿಗೆ ಭೇಟಿ ನೀಡುವಾಗ ಪ್ರತಿಯೊಬ್ಬರೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಎಚ್ಚರಿಕೆಯಿಂದ ಇರಬೇಕೆಂದು ಕೋರಿದ್ದಾರೆ. ಅಪಾಯಕಾರಿ ಜಲಮೂಲಗಳ ಬಳಿ ಸೆಲ್ಫಿ ವ್ಯಾಮೋಹ ಮತ್ತು ಅಜಾಗರೂಕತೆ ಬೇಡವೆಂದು ರಕ್ಷಣಾ ತಂಡವು ತಿಳಿಸಿದೆ.

Tags:

error: Content is protected !!