ಬೆಳಗಾವಿ ಮೂಲದ ಪ್ರತಿಭಾನ್ವಿತ ಕರಾಟೆ ಪಟು ವಿಹಾನ್ ಮಂದಾರ್ ಕಪಿಲೇಶ್ವರ್ಕರ್ ಜಪಾನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ‘3ನೇ ಓಕಿನಾವಾ ಕರಾಟೆ ವರ್ಲ್ಡ್ ಫೆಸ್ಟಿವಲ್’ನಲ್ಲಿ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದು, ಪ್ರದರ್ಶನ ನೀಡಲು ಜಪಾನ್‌ಗೆ ತೆರಳಿದ್ದಾರೆ.

ಬೆಳಗಾವಿ ಮೂಲದ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವಿಹಾನ್ ಮಂದಾರ್ ಕಪಿಲೇಶ್ವರ್ಕರ್ ಜಪಾನ್‌ನ ಓಕಿನಾವಾದಲ್ಲಿ ನಡೆಯಲಿರುವ ‘ದಿ ಥರ್ಡ್ ಓಕಿನಾವಾ ಕರಾಟೆ ವರ್ಲ್ಡ್ ಫೆಸ್ಟಿವಲ್ ಡೆಮಾನ್‌ಸ್ಟ್ರೇಷನ್ ಅಂಡ್ ಟೂರ್ನಮೆಂಟ್’ಗೆ ಭಾರತೀಯ ತಂಡದ ಪರವಾಗಿ ಆಯ್ಕೆಯಾಗಿದ್ದಾರೆ. ಸಾಂಪ್ರದಾಯಿಕ ಕರಾಟೆಯ ಜನ್ಮಸ್ಥಳ ಎಂದೇ ವಿಶ್ವಪ್ರಸಿದ್ಧವಾಗಿರುವ ಓಕಿನಾವಾದಲ್ಲಿ ಸರ್ಕಾರಿ ಮಟ್ಟದಲ್ಲಿ ಆಯೋಜಿಸಲಾಗಿರುವ ಈ ಕರಾಟೆ ಉತ್ಸವದಲ್ಲಿ ವಿಹಾನ್ ಭಾರತವನ್ನು ಪ್ರತಿನಿಧಿಸಲಿದ್ದು, ತಂಡ ಈಗಾಗಲೇ ಜಪಾನ್‌ಗೆ ಪ್ರಯಾಣ ಬೆಳೆಸಿದೆ. ಸಾಂಪ್ರದಾಯಿಕ ಓಕಿನಾವಾ ಶೋರಿನ್-ರ್ಯು ಕರಾಟೆಯಲ್ಲಿ ಕಠಿಣ ಅಭ್ಯಾಸ ನಡೆಸಿದ್ದ ವಿಹಾನ್, ನಿತೀನ್ ಕಪಿಲೇಶ್ವರ್ಕರ್ ಅವರ ಮೊಮ್ಮಗನಾಗಿದ್ದು, ಈ ಸಾಧನೆಯು ಅವರ ಕುಟುಂಬ ಹಾಗೂ ಬೆಳಗಾವಿ ಜಿಲ್ಲೆಗೆ ಅಪಾರ ಹೆಮ್ಮೆ ತಂದಿದೆ.
