Chikkodi

ಶಮನೇವಾಡಿಯ ಎ.ಜಿ.ಎಮ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಗುರು ಪೂರ್ಣಿಮಾ ಮಹೋತ್ಸವ

Share

ಶಮನೇವಾಡಿಯ ಶ್ರೀ ಎ.ಜಿ.ಎಮ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರು ಪೂರ್ಣಿಮಾ ನಿಮಿತ್ತ ವಿಶೇಷ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರು ಹಾಗೂ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಧಾರ್ಮಿಕ ವಿಧಿ-ವಿಧಾನಗಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಸಂಜಯ ಅಂಕಲಿ ಅವರು, “ಗುರುಪೂರ್ಣಿಮೆ ಎಂಬುದು ಕೇವಲ ಒಂದು ಹಬ್ಬವಲ್ಲ, ಅದು ನಮ್ಮ ಜೀವನಕ್ಕೆ ಸರಿಯಾದ ದಾರಿ ತೋರಿದ ಗುರುಗಳಿಗೆ ಕೃತಜ್ಞತೆ ಅರ್ಪಿಸುವ ಪವಿತ್ರ ದಿನವಾಗಿದೆ” ಎಂದರು.

ಮುಂದುವರಿದು ಮಾತನಾಡಿದ ಅವರು, “ಪರಮ ಪೂಜ್ಯ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ತಮ್ಮ ಆಧ್ಯಾತ್ಮಿಕ ಪ್ರವಚನ, ಸರಳ ಜೀವನ ಹಾಗೂ ಮೌಲ್ಯಾಧಾರಿತ ಸಂದೇಶಗಳ ಮೂಲಕ ದೇಶಾದ್ಯಂತ ಅಸಂಖ್ಯಾತ ಭಕ್ತರಲ್ಲಿ ಸಂಸ್ಕಾರದ ಬೆಳಕನ್ನು ನೀಡಿದ್ದಾರೆ. ಶಮನೇವಾಡಿಯಿಂದ ದೆಹಲಿಯವರೆಗೆ ಪಾದಯಾತ್ರೆ ಕೈಗೊಂಡು ಸಮಾಜದ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿ ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಅವರು, ‘ತಮಗೆ ಬಂದ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು’ ಎಂಬ ಉದಾತ್ತ ಧೈಯದಿಂದ ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಜೀವನವನ್ನು ರೂಪಿಸಿದ್ದಾರೆ,” ಎಂದು ಸ್ಮರಿಸಿದರು.

ಇಂದಿನ ಯುವಜನತೆಗೆ ಕೇವಲ ಜ್ಞಾನ ಮಾತ್ರವಲ್ಲದೆ ಉತ್ತಮ ಸಂಸ್ಕಾರಗಳ ಅಗತ್ಯವೂ ಇದೆ. ಗುರುಗಳು ನಮಗೆ ವಿದ್ಯೆಯ ಜೊತೆಗೆ ವ್ಯಕ್ತಿತ್ವವನ್ನು ರೂಪಿಸಿ, ಸತ್ಯದ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಕೌಶಲದ ಜೊತೆಗೆ ಉತ್ತಮ ಸಂಸ್ಕಾರ ನೀಡಿ, ವ್ಯಸನಮುಕ್ತ ಸಮಾಜವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಸಂಯೋಜಕರಾದ ಡಾ. ಸಚೀನ ಮೆಕ್ಕಳಕಿ, ಡಾ. ಶಶಿಕಾಂತ ವಾಳಕೆ, ಕೆ. ಆರ್. ಪಾಟೀಲ, ಅಭಿಜಿತ ಅಕಿವಾಟೆ, ಪ್ರಶಾಂತ ಶೇಡಬಾಳಕರ, ಅಶ್ವಿನಿ ಫರಲಾದ, ಸ್ನೇಹಾ ವಾಳಕಿ, ವೈಶ್ಣವಿ ಶೆಗಳೆ, ಶ್ರೀಮತಿ ಅಶ್ವಿನಿ ಮೊನಾಚಾರ್ಯ, ಶ್ರೀಮತಿ ರಾಣಿ ಸುಟುರೆ, ರವಿ ವಾಳಕೆ, ಪಿರಗೌಡಾ ಹುಳಿಕೊಪ್ಪೆ, ಸ್ವಯಂ ಶಾಮ್, ಕಾಡೇಶ ಕಲಾದಗಿ, ಮಾಧುರಿ ಬೊರಗಾಂವೆ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Tags:

error: Content is protected !!