ಬರುವ ಆ.೧ರಂದು ಪದ್ಮಶ್ರೀ ಡಾ. ಪ್ರಭಾಕರ ಕೋರೆ ೭೯ನೇ ಹುಟ್ಟು ಹಬ್ಬದ ಅಂಗವಾಗಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಅಂಕಲಿ ಗ್ರಾಮದಲ್ಲಿ ವಿವಿಧ ಸಾಮಾಜಿಕ ಹಾಗೂ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಾ. ಪ್ರಭಾಕರಣ್ಣಾ ಕೋರೆ ಹುಟ್ಟುಹಬ್ಬ ಆಚರಣಾ ಸಮಿತಿಯ ಅಧ್ಯಕ್ಷ ಮತ್ತು ಕೆಎಲ್ಇ ಸಂಸ್ಥೆಯ ನಿರ್ದೇಶಕ ಬಿ ಆರ್ ಪಾಟೀಲ್ ಹೇಳಿದರು.


ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕೋಡಿ.ಶಿವಶಕ್ತಿ ಶುಗರ್ ಲಿಮಿಟೆಡ್ ಸೌದತ್ತಿ.ಹೆರ್ಮ್ಸ್ ಡಿಸ್ಟಲರಿ ಪ್ರೈವೇಟ್ ಲಿಮಿಟೆಡ್ ಯಡ್ರಾವ್. ಡಾ ಪ್ರಭಾಕರ್ ಕೋರೆ ಕೋಪ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಅಂಕಲಿ. ಮೇ ಇನಾಮದಾರ್ ಶುಗರ್ಸ್ ಲಿಮಿಟೆಡ್ ಮೂರಕಂಬಿ. ಮತ್ತು ಕೆಎಲ್ಇ ಸಂಸ್ಥೆಯ ಸಂಘ ಸಂಸ್ಥೆಗಳು. ಜನಶಕ್ತಿ ಫೌಂಡೇಶನ್ ಚಿಕ್ಕೋಡಿ. ಹಾಗೂ ಕೆಎಲ್ಇ ಸಂಸ್ಥೆಯ ಡಾ ಪ್ರಭಾಕರ್ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ/ ಚಿಕ್ಕೋಡಿ ಇವರ ಸಯುಕ್ತ ಆಶ್ರಯದಲ್ಲಿ ಪದ್ಮಶ್ರೀ ಪ್ರಶಸ್ತಿ ಪಾತ್ರ ಡಾ ಪ್ರಭಾಕರ್ ಕೋರೆ ಇವರ 79ನೆಯ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಉಚಿತ ರಕ್ತದಾನ ಶಿಬಿರ, ಪದ್ಮಶ್ರೀ ಪ್ರಶಸ್ತಿ ಪಡೆದ ಸನ್ಮಾನ ಸಮಾರಂಭ ವನಮಹೋತ್ಸವ. ರಾಷ್ಟ್ರಮಟ್ಟದ ಪುರುಷರ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಆರೋಗ್ಯ, ಶಿಕ್ಷಣ, ಸಹಕಾರ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಅವರ ಜನ್ಮದಿನವನ್ನು ಔಚಿತ್ಯಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿಯ ಸಂಸದ ಜಗದೀಶ್ ಶೆಟ್ಟರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿಧಾನಪರಿಷತ್ತಿನ ಸದಸ್ಯರಾದ ಪ್ರಕಾಶ್ ಹುಕ್ಕೇರಿ ವಹಿಸಲಿದ್ದಾರೆ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಮಾಜಿ ಸಚಿವೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾಜಿ ಸಚಿವೆ ಶಾಸಕಿ ಶಶಿಕಲಾ ಜೊಲ್ಲೆ, ಶಾಸಕರಾದ ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ, ಅಭಯ ಪಾಟಿಲ್, ಮಹಾಂತೇಶ್ ಕೌಜಲಗಿ, ಬಾಬಾಸಾಹೇಬ್ ಪಾಟೀಲ್, ನಿಖಿಲ್ ಕತ್ತಿ, ವಿಧಾನ ಪರಿಷತ್ತಿನ ಸದಸ್ಯರಾದ ಚನ್ನರಾಜ ಹಟ್ಟಿಹೋಳಿ ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಅಮಿತ್ ಕೋರೆ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ರಮೇಶ ಕತ್ತಿ, ಅಮರಸಿಂಹ ಪಾಟೀಲ, ಮಾಜಿ ಶಾಸಕರಾದ ವೀರಕುಮಾರ್ ಪಾಟೀಲ, ಶ್ಯಾಮ್ ಘಾಟಗೆ ಕಲ್ಲಪ್ಪ ಮಗೆನ್ನವರ, ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ, ಕೆಎಲ್ ಇ ಸಂಸ್ಥೆಯ ನಿರ್ದೇಶಕಿ ಡಾ ಪ್ರೀತಿ ದೊಡ್ಡವಾಡ, ಕೋರೆ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ ಪಾಲ್ಗೊಳಿದ್ದಾರೆ ಎಂದು ಹೇಳಿದರು.ಮುಂಜಾನೆ 10 ಗಂಟೆಗೆ ಅಭಿನಂದನಾ ಸಮಾರಂಭ ಹಾಗೂ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವನ್ನು ನಡೆಯಲಿದ್ದು, ಮಧ್ಯಾಹ್ನ 2 ರಿಂದ 6:00 ವರೆಗೆ ರಾಷ್ಟ್ರಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಸಾಯಂಕಾಲ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕ ರಾಜೇಶ ಕೃಷ್ಣನ್, ನಟಿ ಅನುಶ್ರೀ ನೇತೃತ್ವದಲ್ಲಿ ನಡೆಯಲಿದೆ. ಅಂತರಾಷ್ಟ್ರೀಯ ಕುಸ್ತಿ ಪಂದ್ಯಾಟಗಳಲ್ಲಿ ಭಾರತದಲ್ಲಿರುವ ಸರ್ವಶ್ರೇಷ್ಠ ಕುಸ್ತಿಪಟುಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಾಧ್ಯಕ್ಷ ಭರತೇಶ ಬನವಣೆ, ಅಜೀತರಾವ ದೇಸಾಯಿ,ಮಲ್ಲಿಕಾರ್ಜುನ ಕೋರೆ ತಾತ್ಯಾಸಾಹೇಬ ಕಾಟೆ, ಮಹಾವೀರ ಮಿರ್ಜೆ, ಮಹಾವೀರ ಕಾತ್ರಾಳೆ, ಚೇತನ ಪಾಟೀಲ, ಭರಮಗೌಡ ಪಾಟೀಲ, ಮಲ್ಲಪ್ಪಾ ಮೈಶಾಳೆ, ಅಣ್ಣಾಸಾಹೇಬ ಇಂಗಳೆ, ಅಣ್ಣಾಸಾಹೇಬ ಪಾಟೀಲ, ಸುರೇಶ ಪಾಟೀಲ, ಮಹಾಂತೇಶ ಪಾಟೀಲ, ಶ್ರೀಕಾಂತ ಉಮರಾಣೆ ,ಸಿದಗೌಡ ಮಗದುಮ್ಮ, ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಖಂಡಗಾವೆ, ದೇವೇಂದ್ರ ಕರೋಶಿ, ಕರ್ನಾಟಕ ಕೇಸರಿ ರತನಕುಮಾರ ಮಠಪತಿ, ಸಂಜಯ ಕುಡಚಿ ತಾತ್ಯಾಸಾಹೇಬ ಅಂಬಿ,ಪಿಂಟು ಹಿರೇಕುರುಬರ, ಸಚೀನ ಪೂಜೇರಿ, ಶಿವಶಕ್ತಿ ಶುಗರ್ಸನ ಅಧಿಕಾರಿಗಳಾದ ಬಿ.ಎ.ಪಾಟೀಲ, ಯುವರಾಜ ಪಾಟೀಲ ಉಪಸ್ಥಿತರಿದ್ದರು.
ಸ್ವಾಗತ ಎನ.ಎಸ್.ಹಿರೇಮಠ, ರಾಹುಲ ಇಚಲಕರಂಜಿ ಉಪಸ್ಥಿತರಿದ್ದರು.
