VIJAYANAGAR

ಹೂವಿನಹಡಗಲಿಯಲ್ಲಿ ಎಸ್‌ಬಿಐ ಎಟಿಎಂ ಕಳವಿಗೆ ವಿಫಲ ಯತ್ನ: ಸಿಸಿಟಿವಿ ಆಧರಿಸಿ ಕಳ್ಳರ ಶೋಧ!

Share

ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಇಂದು ಬೆಳಗಿನ ಜಾವ ಎಸ್‌ಬಿಐ ಎಟಿಎಂ ಕಳವಿಗೆ ವಿಫಲ ಯತ್ನ ನಡೆದಿದೆ. ಜಿಬಿಆರ್ ಕಾಲೇಜು ಎದುರಿನ ಎಟಿಎಂ ಯಂತ್ರವನ್ನು ಒಡೆದು ಹಣ ದೋಚಲು ಯತ್ನಿಸಿದ ದುಷ್ಕರ್ಮಿಗಳು, ಕಳವು ಸಾಧ್ಯವಾಗದೇ ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಜಯನಗರದ ಹೂವಿನಹಡಗಲಿ ಪಟ್ಟಣದ ಜಿಬಿಆರ್ ಕಾಲೇಜು ಎದುರಿಗಿರುವ ಎಸ್‌ಬಿಐ ಎಟಿಎಂ ಸೆಂಟರ್‌ನಲ್ಲಿ ಬೆಳಗಿನ ಜಾವ ಸುಮಾರು 4 ಗಂಟೆಗೆ ಈ ಘಟನೆ ನಡೆದಿದೆ. ಎಟಿಎಂ ಯಂತ್ರವನ್ನು ಒಡೆದು ಹಣ ಎಗರಿಸಲು ದುಷ್ಕರ್ಮಿಗಳು ಯತ್ನಿಸಿದ್ದು, ಕೊನೆಗೆ ಕಳವು ಮಾಡಲು ಸಾಧ್ಯವಾಗದೆ ಕಾಲ್ಕಿತ್ತಿದ್ದಾರೆ. ಎಟಿಎಂ ಕೇಂದ್ರಕ್ಕೆ ಸೂಕ್ತ ಭದ್ರತಾ ಸಿಬ್ಬಂದಿ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಮುಖ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಪಟ್ಟಣದಲ್ಲಿ ಪದೇ ಪದೇ ಇಂತಹ ಕೃತ್ಯಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಎಟಿಎಂನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

Tags:

error: Content is protected !!