Uncategorized

ಪ್ರತಿಯೊಬ್ಬರೂ ಕಾನೂನು ಮಾಹಿತಿ ಪಡೆಯುವುದು ಅವಶ್ಯಕ

Share

ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾ ವಿದ್ಯಾಲಯ, ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರಡಿಗುದ್ದಿ ಗ್ರಾಮ ಪಂಚಾಯತ್ ವತಿಯಿಂದ ಉಚಿತ ಕಾನೂನು ಅರಿವು ಮತ್ತು ಕಾರ್ಯಕ್ರಮವನ್ನು ಕರಡಿಗುದ್ದಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜನರಲ್ಲಿ ಕಾನೂನಿನ ಕುರಿತು ಸರಿಯಾದ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ.ಕಾನೂನು ಬಗ್ಗೆ ತಿಳಿವಳಿಕೆ ಕೊರತೆಯಿಂದಲೇ ವ್ಯವಸ್ಥೆಯ ಕುರಿತು ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಇದನ್ನು ನಿವಾರಿಸಲು ಹಳ್ಳಿ-ಹಳ್ಳಿಗಳಲ್ಲಿ ಉಚಿತ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ಹಿರಿಯ ದಿವಾನಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಎನ್. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.

ನವೀನ್ ಕೆ ಪ್ರೊಫೆಷನಲ್ ಪಿಎಸ್ಐ ಪೊಲೀಸ್ ಠಾಣೆ ಮಾರಿಹಾಳ ಇವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಪ್ರತಿಮಾ ಜೋಶಿ ಮಹಿಳೆಯರ ಹಕ್ಕುಗಳ ಬಗ್ಗೆ, ವರದಕ್ಷಿಣೆ ಕಾಯ್ದೆ,ಸಮಾನ ವೇತನ ಕಾಯ್ದೆ, ಉಚಿತ ಕಾನೂನು ನೆರವಿನ ಬಗ್ಗೆ, ಮಹಿಳೆಯರ ಕೌಟುಂಬಿಕ ಹಿಂಸೆ ಇತ್ಯಾದಿ ಕಾನೂನುಗಳ ಬಗ್ಗೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಡಿ.ಪ್ರಸನ್ನ ಕುಮಾರ್ ಉಚಿತ ಕಾನೂನು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಯೋಜಕ ಚೇತನ್ ಕುಮಾರ್ ಟಿಎಂ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನೆರವೇರಿಸಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಕಾಂತ್ ಸಿಎಂ ಮತ್ತು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ ಗೌಡ ಪಾಟೀಲ ಹಾಗೂ ನೇಸರ್ಗಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಲಪ್ಪ ನೇಸರಗಿ ಹಾಗೂ ಸಹಾಯಕ ಪ್ರಾಧ್ಯಾಪಕ ಪ್ರೀತಮ್ ರೇವಣಕರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಶಿಬಿರವು ಜನರಲ್ಲಿ ಕಾನೂನು ಜಾಗೃತಿ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ನೆರವಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಮ್ಮ ಹಕ್ಕುಗಳ ಕುರಿತು ತಿಳಿದುಕೊಂಡು , ಅಗತ್ಯವಿದ್ದಲ್ಲಿ ಕಾನೂನು ಸಹಾಯ ಪಡೆಯುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಮೂರನೇ ವರ್ಷದ ಕಾನೂನು ವಿದ್ಯಾರ್ಥಿನಿ ಸಂಜನಾ ಇಟಗಿ ನಿರೂಪಿಸಿದರು. ಕಾನೂನು ನೆರವು ಕೇಂದ್ರದ ವಿದ್ಯಾರ್ಥಿ ಕಾರ್ಯದರ್ಶಿ ಸಚಿನ ಕೋಟಗಿ ವಂದಿಸಿದರು. ಶಶಿಧರ ಸಸಾಲಟ್ಟಿ ಮತ್ತು ಪ್ರವೀಣ್ ಕಾಂಬಳೆ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

Tags:

error: Content is protected !!