Chikkodi

ಕಾರದಗಾದ ಪೀರ್ ಬಂಗಾಲಿ ಬಾಬಾ ದರ್ಗಾಕ್ಕೆ ನುಗ್ಗಿದ ದೂಧಗಂಗಾ ನದಿ ನೀರು

Share

ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ ಹಾಗೂ ಗಡಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೂಧಗಂಗಾ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ನದಿಯು ಪಾತ್ರ ಮೀರಿ ಹರಿಯುತ್ತಿರುವುದರಿಂದ ನಿಪಾಣಿ ತಾಲೂಕಿನ ಕಾರದಗಾ ಗ್ರಾಮದ ಪ್ರಸಿದ್ಧ ಪೀರ್ ಬಂಗಾಲಿ ಬಾಬಾ ದರ್ಗಾಕ್ಕೆ ಪ್ರವಾಹದ ನೀರು ನುಗ್ಗಿದೆ.

ದರ್ಗಾದ ಆವರಣ ಹಾಗೂ ಒಳಭಾಗದಲ್ಲಿ ನೀರು ನುಗ್ಗಿರುವುದರಿಂದ ಪೀರ್ ಬಂಗಾಲಿ ಬಾಬಾನ ದರ್ಶನಕ್ಕಾಗಿ ಬರುವ ಭಕ್ತಾದಿಗಳಿಗೆ ತೀವ್ರ ತೊಂದರೆಯಾಗಿದ್ದು, ದರ್ಶನವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ದರ್ಗಾಕ್ಕೆ ಹೋಗುವ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.

ಇದೇ ರೀತಿ ಮಳೆ ಮುಂದುವರಿದಲ್ಲಿ ಕಾರದಗಾ ಗ್ರಾಮದ ವಸತಿ ಪ್ರದೇಶಗಳಿಗೂ ನೀರು ನುಗ್ಗುವ ಭೀತಿ ಎದುರಾಗಿದ್ದು, ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Tags:

error: Content is protected !!