Chikkodi

ನಿರಂತರ ಮಳೆಯಿಂದಾಗಿ ಗೋಡೆ ಕುಸಿದು ಸ್ಥಳದಲ್ಲೇ ಎಮ್ಮೆ ಸಾವು; ಜಾನುವಾರುಗಳಿಗೆ ಗಾಯ

Share

ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮದಲ್ಲಿ ಮನೆಯ ಗೋಡೆಯೊಂದು ಕುಸಿದು ಬಿದ್ದಿದ್ದು, ಪರಿಣಾಮವಾಗಿ ಒಂದು ಎಮ್ಮೆ ಮೃತಪಟ್ಟು, ಮೂರು ಜಾನುವಾರುಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಗ್ರಾಮದ ನಿವಾಸಿ ಲಕ್ಷ್ಮಣ ಅಡಿವೆಪ್ಪ ಕಂಠಿಬಾಳಿ ಅವರಿಗೆ ಸೇರಿದ ಮನೆಯ ಗೋಡೆ ಇದಾಗಿದ್ದು, ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಗೋಡೆ ಕುಸಿದು ಪಕ್ಕದಲ್ಲೇ ಇದ್ದ ಪತ್ರಾಸ ಶೆಡ್‌ನ ಮೇಲೆ ಕುಸಿದು ಬಿದ್ದಿದೆ.

ಲಕ್ಷ್ಮಣ ಕಂಠಿಬಾಳಿ ಅವರು ತಮ್ಮ ಜಾನುವಾರುಗಳನ್ನು ಪತ್ರಾಸ ಶೆಡ್‌ನಲ್ಲಿ ಕಟ್ಟಿದ್ದರು. ಗೋಡೆ ದಿಢೀರನೆ ಕುಸಿದು ಬಿದ್ದ ಪರಿಣಾಮ ಶೆಡ್‌ನಲ್ಲಿದ್ದ ಒಂದು ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ.ಇನ್ನುಳಿದಂತೆ ಮತ್ತೊಂದು ಎಮ್ಮೆ ಹಾಗೂ ಎರಡು ಎತ್ತುಗಳು ಅವಶೇಷಗಳ ಅಡಿಯಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡಿವೆ. ಗಾಯಾಳು ಜಾನುವಾರುಗಳಿಗೆ ಸದ್ಯ ಸ್ಥಳೀಯ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೋಡೆ ಕುಸಿತದಿಂದಾಗಿ ಲಕ್ಷ್ಮಣ ಕಂಠಿಬಾಳಿ ಅವರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು, ಬಡ ಕುಟುಂಬವು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಮೂಕಪ್ರಾಣಿಗಳನ್ನು ಕಳೆದುಕೊಂಡು ಕಂಗಾಲಾಗಿರುವ ರೈತ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸೂಕ್ತ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!