Belagavi

ತಾಯ್ನಾಡಿಗೆ ಮರಳಿದ ಯೋಧ ಬಸವರಾಜಗೆ ಸುರೇಶ ಯಾದವ ಫೌಂಡೇಶನದಿಂದ ಭವ್ಯ ಸನ್ಮಾನ

Share

ದೇಶದ ರಕ್ಷಣೆಗಾಗಿ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಮುಡಿಪಾಗಿಟ್ಟು, ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳುವ ಯೋಧರಿಗೆ ಊರಿನಲ್ಲಿ ಗೌರವಯುತ ಹಾಗೂ ಅದ್ದೂರಿಯಾದ ‘ಸನ್ಮಾನ ಸಮಾರಂಭ’ವನ್ನು ಆಯೋಜಿಸುವುದು ನಮ್ಮ ಸಂಪ್ರದಾಯ ಮತ್ತು ಹೆಮ್ಮೆಯ ಸಂಕೇತವಾಗಿದೆ ಎಂದು ಕಾರಂಜಿಮಠದ ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಹೇಳಿದರು.

ನಗರದ ರಾಮತೀರ್ಥ ನಗರದ ಸಮುದಾಯ ಭವನದಲ್ಲಿ ಸುರೇಶ ಯಾದವ ಫೌಂಡೇಶನ ಹಾಗೂ ರಾಮತೀರ್ಥ ನಗರ ರಹವಾಸಿಗ ಸಹಯೋಗದೊಂದಿಗೆ ಭಾನುವಾರ ಆಯೋಜಿಸಲಾದ , 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಸ್ವ-ಗ್ರಾಮಕ್ಕೆ ಆಗಮಿಸಿದ ವೀರಯೋಧರಾದ ಹವಾಲ್ದಾರ್ ಬಸವರಾಜ ಶಿವಗುಂಡಪ್ಪಾ ಕುಂದರಗಿ ಅವರ ಸ್ವಾಗತ ಹಾಗೂ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಾ, ದೇಶದ ಕೋಟ್ಯಂತರ ನಾಗರಿಕರ ನೆಮ್ಮದಿಯ ಬದುಕಿಗೆ ಕಾರಣರಾಗಿರುವ ಸೈನಿಕರನ್ನು ಕೇವಲ ವಿಶೇಷ ದಿನಗಳಿಗಷ್ಟೇ ಸೀಮಿತಗೊಳಿಸದೆ, ದೈನಂದಿನ ಜೀವನದಲ್ಲಿಯೂ ನಿರಂತರವಾಗಿ ಗೌರವಿಸಬೇಕು. ಸೈನಿಕರು ಮತ್ತು ಅವರ ಕುಟುಂಬದ ತ್ಯಾಗಕ್ಕೆ ಪ್ರತಿಯೊಬ್ಬ ಭಾರತೀಯನೂ ದೈನಂದಿನ ಬದುಕಿನಲ್ಲಿ ಕೃತಜ್ಞತೆ ಸಲ್ಲಿಸುವ ಮೂಲಕ ನೈಜ ದೇಶಭಕ್ತಿ ಮೆರೆಯಬೇಕಾದ ಅಗತ್ಯವಿದೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿ ಸುರೇಶ ಯಾದವ ಅವರು ಮಾತನಾಡಿ, ದೇಶದ ಪ್ರಗತಿಯಲ್ಲಿ ಸೈನಿಕರ ಕೊಡುಗೆ ಅಪಾರ ಮತ್ತು ಅತ್ಯಮೂಲ್ಯ. ಗಡಿ ಕಾಯುವ ಮೂಲಕ ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವ ಯೋಧರು, ದೇಶದ ಅಭಿವೃದ್ಧಿಗೆ ಬಲವಾದ ಅಡಿಪಾಯವಾಗಿದೆ. ಅವರ ಶಕ್ತಿ, ಭದ್ರತೆಯಿಂದ ನಾಡಿನಲ್ಲಿ ನಾವೆಲ್ಲರೂ ಸುಕ್ಷತೆಯಿಂದ ಜೀವನ ಸಾಗುತ್ತಿದ್ದಾರೆ. ಸುಧೀರ್ಘ ಸೇವೆ ತಾಯ್ನಾಡಿಗೆ ಆಗಮಿಸಿದ ಈ ನೆಲದ ಹೆಮ್ಮೆಯ ವೀರಪುತ್ರ ಬಸವರಾಜ ಕುಂದರಗಿ ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.


ಸನ್ಮಾನ ಸ್ವೀಕರಿಸಿ ವೀರಯೋಧರಾದ ಹವಾಲ್ದಾರ್ ಬಸವರಾಜ ಶಿವಗುಂಡಪ್ಪಾ ಕುಂದರಗಿ ಮಾತನಾಡಿ, “ದೇಶದ ಗಡಿಕಾಯುವ ಸೌಭಾಗ್ಯ ಸಿಕ್ಕಿದ್ದು ನನ್ನ ಜೀವನದ ಹೆಮ್ಮೆ. ಇಂದು ಸ್ವಂತ ಊರಿನ ಜನತೆ ತೋರಿರುವ ಪ್ರೀತಿ ಮತ್ತು ಗೌರವ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಯುವ ಪೀಳಿಗೆ ದೇಶ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು” ಎಂದು ಕರೆ ನೀಡಿದರು.

ಗಮನ ಸೆಳೆದ ಮೆರವಣಿಗೆ: 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ನಾಡಿನ ಕೀರ್ತಿ ಬೆಳಗಿಸಿ ಮರಳಿ ಸ್ವ-ಗ್ರಾಮಕ್ಕೆ ಆಗಮಿಸಿದ ಜಿಲ್ಲೆಯ ಹೆಮ್ಮೆಯ ಪುತ್ರ ವೀರಯೋಧರಾದ ಹವಾಲ್ದಾರ್ ಬಸವರಾಜ ಶಿವಗುಂಡಪ್ಪಾ ಕುಂದರಗಿ ಇವರನ್ನು ಭವ್ಯ ಮೆರವಣಿಗೆಯೊಂದಿಗೆ ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಅತ್ಯಂತ ಸಡಗರದಿಂದ ಸ್ವಾಗತಿಸಲಾಯಿತು.
ನಂತರ ತೆರೆದ ವಾಹನದಲ್ಲಿ ಯೋಧರನ್ನು ಕೂರಿಸಿ, ಮೈಸೂರು ಪೇಟ ತೊಡಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಯುವಕರು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುತ್ತಾ, “ಭಾರತ್ ಮಾತಾ ಕೀ ಜೈ” ಮತ್ತು “ವೀರ ಯೋಧನಿಗೆ ಜಯವಾಗಲಿ” ಎಂಬ ಘೋಷಣೆಗಳನ್ನು ಕೂಗಿ ಸೈನಿಕನಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಕ್ತಾರ್ ಪಠಾಣ್, ಮುಖ್ಯ ಅತಿಥಿ ಮುರಘೇಂದ್ರಗೌಡ ಪಾಟೀಲ್‌ ವಹಿಸಿದರು, ತುಕಾರಾಂ ಹಾಜರತಿ, ಕೆಂಪಣ್ಣ ಜಿನ್ರಾಳ, ಬಳಪ್ಪಾ ಹಣಜಿ , ರಾಜಶೇಖರ್ ಶಿಂಧೆ , ನಿತಿನ್ ಪಾಟೀಲ್ , ಸಚಿನ್ ಪಾಟೀಲ್, ಅಪಾಯ ಕೊಲ್ಕರ್, ಮಲ್ಲಿಕಾರ್ಜುನ ಹಿತ್ತಲಮನಿ, ಬಿ.ಎಸ್‌ ಮುರಗೋಡ , ಆನಂದ ಪಾಟೀಲ್‌ , ಈರಯ್ಯಾ ಖೋತ, ಗುರುಪುತ್ರಪ್ಪಾ ತೋರಗಲ, ಹಾಗೂ ಗಣೇಶ ಉತ್ಸವ ಮಂಡಳಿಯ ಸದಸ್ಯರು, ಸುರೇಶ ಯಾದವ ಫೌಂಡೇಶನ ಸರ್ವ ಸದ್ಯರು, ರಾಮತೀರ್ಥ ನಗರ ರಹವಾಸಿಗಳು ಹಾಗೂ ಇತರರು ಇದ್ದರು. ಸಿ.ಎಸ್‌ ಬಿಡ್ನಾಳ ನಿರೂಪಿಸಿ, ವಂದಿಸಿದರು.

Tags:

error: Content is protected !!