Uncategorized

ತಿಲಾರಿ ಅಣೆಕಟ್ಟಿನ ಹೆಚ್ಚುವರಿ ನೀರನ್ನು ರಾಕಸಕೊಪ್ಪ ಜಲಾಶಯ ಹಾಗೂ ಮಾರ್ಕಂಡೇಯ ನದಿಗೆ ಹರಿಸಿ…

Share

ಬೆಳಗಾವಿ ನಗರ ಹಾಗೂ ಗಡಿ ಭಾಗದ ತೀವ್ರ ಜಲಕ್ಷಾಮಕ್ಕೆ ಮುಕ್ತಿ ಹಾಡಲು ಬೆಳಗಾವಿ ಮಹಾನಗರ ಪಾಲಿಕೆಯ ಮಾಜಿ ನಗರಸೇವಕರ ಸಂಘಟನೆ ಮುಂದಾಗಿದೆ. ಮಹಾರಾಷ್ಟ್ರದ ಚಂದಗಡ ಮತಕ್ಷೇತ್ರದ ಶಾಸಕರಾದ ಶಿವಾಜಿರಾವ್ ಪಾಟೀಲ್ ಅವರಿಗೆ ಪತ್ರ ಬರೆದಿರುವ ಸಂಘಟನೆಯು, ತಿಲಾರಿ ಅಣೆಕಟ್ಟಿನ ಹೆಚ್ಚುವರಿ ನೀರನ್ನು ರಾಕಸಕೊಪ್ಪ ಜಲಾಶಯ ಹಾಗೂ ಮಾರ್ಕಂಡೇಯ ನದಿಗೆ ಹರಿಸುವಂತೆ ವಿಶೇಷ ವಿನಂತಿಸಿದೆ.

ಗಡಿ ಜಿಲ್ಲೆ ಬೆಳಗಾವಿಯ ಕುಡಿಯುವ ನೀರಿನ ಅಭಾವ ಹಾಗೂ ರೈತರ ಜಲಸಂಕಷ್ಟವನ್ನು ನೀಗಿಸಲು ಮಹಾರಾಷ್ಟ್ರದ ತಿಲಾರಿ ಅಣೆಕಟ್ಟಿನ ನೀರನ್ನು ಬಳಸಿಕೊಳ್ಳುವ ಕುರಿತು ಮಾಜಿ ನಗರಸೇವಕರ ಸಂಘಟನೆಯು ಚಂದಗಡ ಶಾಸಕ ಶಿವಾಜಿರಾವ್ ಪಾಟೀಲ್ ಅವರಿಗೆ ಮಹತ್ವದ ಮನವಿ ಪತ್ರ ಸಲ್ಲಿಸಿದೆ. ತಿಲಾರಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಯ ನಂತರ ಉಳಿಯುವ ಹೆಚ್ಚುವರಿ ನೀರನ್ನು ರಾಕಸಕೊಪ್ಪ ಜಲಾಶಯಕ್ಕೆ ವರ್ಗಾಯಿಸಿ, ಅಲ್ಲಿಂದ ಮಾರ್ಕಂಡೇಯ ನದಿಗೆ ತಿರುಗಿಸುವುದರಿಂದ ಬೆಳಗಾವಿ ನಗರದ ಜನತೆಗೆ ಹಾಗೂ ಗಡಿಭಾಗದ ರೈತರಿಗೆ ವರದಾನವಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜಂಟಿ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಶಾಸಕರು ಈ ಕುರಿತು ಸರ್ಕಾರದ ಮಟ್ಟದಲ್ಲಿ ಸೂಕ್ತ ಬೆಂಬಲ ನೀಡಿ ಬೆಳಗಾವಿ ನಾಗರಿಕರ ಹಾಗೂ ರೈತರ ಹಿತರಕ್ಷಣೆ ಮಾಡಬೇಕೆಂದು ಸಂಘಟನೆಯು ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಶಿವಾಜೀರಾವ್ ಸುಂಠಕರ, ದೀಪಕ್ ವಾಘೇಲಾ, ಅಮರ್ ಯಳ್ಳೂರಕರ, ಸುನೀಲ್ ಬಾಳೇಕುಂದ್ರಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!