Khanapur

ಶಿಸ್ತು, ಹಾಜರಾತಿಯೇ ಯಶಸ್ಸಿನ ಬುನಾದಿ: ಪ್ರಾಂಶುಪಾಲ ಫಾದರ್ ನೆಲ್ಸನ್ ಪಿಂಟೋ

Share

ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಮತ್ತು ನಿರಂತರ ಶಾಲಾ ಹಾಜರಾತಿ ಅತ್ಯಂತ ಅಗತ್ಯ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸುವ ಮೂಲಕ ಉತ್ತಮ ಶಿಕ್ಷಣಕ್ಕೆ ಸಹಕರಿಸಬೇಕು ಎಂದು ಖಾನಾಪುರದ ಸರ್ವೋದಯ ವಿದ್ಯಾಲಯ ಶಾಲೆಯ ಪ್ರಾಂಶುಪಾಲರಾದ ಫಾದರ್ ನೆಲ್ಸನ್ ಪಿಂಟೋ ಕರೆ ನೀಡಿದ್ದಾರೆ.

ಖಾನಾಪುರದ ಸರ್ವೋದಯ ವಿದ್ಯಾಲಯ ಶಾಲೆಯಲ್ಲಿ ಆಯೋಜಿಸಲಾಗಿದ್ದ 1ನೇ ಮತ್ತು 5ನೇ ತರಗತಿಯ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಮಾತನಾಡಿದ ಪ್ರಾಂಶುಪಾಲ ಫಾದರ್ ನೆಲ್ಸನ್ ಪಿಂಟೋ ಅವರು, ಶಿಸ್ತು ಮತ್ತು ಹಾಜರಾತಿಗೆ ಮೊದಲ ಆದ್ಯತೆ ನೀಡುವಂತೆ ಮನವಿ ಮಾಡಿದರು. ಶಿಸ್ತು ಉತ್ತಮ ಜೀವನದ ಬುನಾದಿಯಾಗಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಶಾಲಾ ನಿಯಮಗಳನ್ನು ಪಾಲಿಸಬೇಕು. ಪಾಲಕರು ಮತ್ತು ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಶ್ರೇಷ್ಠ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು. ಇದೇ ವೇಳೆ ಶಾಲಾ ವಾತ್ಸಲ್ಯದ ಕುರಿತು ಅರಿವು ಮೂಡಿಸಿದ ಅವರು, ಪಾಲಕರು ಹಾಗೂ ವಿದ್ಯಾರ್ಥಿಗಳಿಂದ ಸೂಕ್ತ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಮಾರ್ಗದರ್ಶನ ನೀಡಿದರು.

Tags:

error: Content is protected !!