ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾತ್ರಾಳ ಗ್ರಾಮದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಪಕ್ಷದ ಶಾಲು ಹಾಕಿ ನೂತನ ಸದಸ್ಯರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಕಾಂಗ್ರೆಸ್ ಸರ್ವಜನರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದು, ಹೊಸ ಕಾರ್ಯಕರ್ತರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ.

ಹಳಬರು ಹಾಗೂ ಹೊಸಬರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಲಾಯಿತು. ಕಾತ್ರಾಳ ಗ್ರಾಮದ ಹಿರಿಯರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಡಾ. ಶ್ರೀಶೈಲ ಕೊಕಟನೂರ ಅವರ ನೇತೃತ್ವದಲ್ಲಿ ಹಣಮಂತ ಕೊಕಟನೂರ, ಮಹದೇವ ಕೊಕಟನೂರ, ನಾಗಪ್ಪ ಕೊಕಟನೂರ, ಸಿದ್ರಾಯ ನ್ಯಾಮಗೌಡ, ಮಲ್ಲಿಕಾರ್ಜುನ ಬಾಡಗಿ, ರಾಮಪ್ಪ ಕೊಕಟನೂರ, ಸಿದ್ರಾಯ ಕೊಕಟನೂರ, ಭೀಮಪ್ಪ ದುಂಡಪ್ಪ ಕೊಕಟನೂರ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಡಿ. ಪಡಸಲಗಿ, ಎಸ್.ಡಿ. ಗುಗ್ಗರಿ, ಬಾಳಪ್ಪ ಪಡಸಲಗಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಮಾಜಿ ಸದಸ್ಯ ಇಮ್ತಿಯಾಜ್ ಜಮಾದಾರ, ಮಹಮ್ಮದಸಾಬ ಜಮಾದಾರ, ಗ್ಯಾರಂಟಿ ಸಮಿತಿಯ ಸದಸ್ಯ ಲಾಲಸಾಬ ಜಮಾದಾರ, ಸುರೇಶ ಚಿಕ್ಕಲಕಿ, ಹಣಮಂತ ಗಲಗಲಿ, ಇಬ್ರಾಹಿಂ ಗುರಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
