Vijaypura

ಮದುವೆಗೆ ಹೆಣ್ಣು ಬೇಕೆಂದು ಬಿಎಸ್‌ಎನ್‌ಎಲ್ ಟವರ್ ಏರಿದ ಯುವಕ

Share

ಮದುವೆಗಾಗಿ ಹೆಣ್ಣು ಬೇಕೆಂದು ಒತ್ತಾಯಿಸಿ ಯುವಕನೊಬ್ಬ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಏರಿ ಹೈಡ್ರಾಮಾ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಏರಿದ ಯುವಕ, ತನಗೆ ಮದುವೆಯಾಗಲು ಹೆಣ್ಣು ಬೇಕೆಂದು ಕೂಗಾಡುತ್ತಾ ಕೆಲಕಾಲ ರಾದ್ದಾಂತ ನಡೆಸಿದ್ದಾನೆ. ಯುವಕನ ಹೆಸರು ಹಾಗೂ ವಿಳಾಸ ಇನ್ನೂ ತಿಳಿದುಬಂದಿಲ್ಲ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಯುವಕನನ್ನು ನೋಡಲು ಮುಗಿಬಿದ್ದರು. ಮಾಹಿತಿ ಪಡೆದ ಇಂಡಿ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸುವ ಕಾರ್ಯಾಚರಣೆ ನಡೆಸಿದರು.
ಈ ಘಟನೆ ಇಂಡಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Tags:

error: Content is protected !!