Vijaypura

ವಿಜಯಪುರ ಜಿಲ್ಲೆಯ ಸೋಮದೇವರ ಹಟ್ಟಿ ಎಲ್ ಟಿ 1 ರಲ್ಲಿ ವಿಶೇಷ ಜಾತ್ರೆ; ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾಗ್ತಾರೆ ಘಟಾನುಘಟಿ ರಾಜಕಾರಣಿಗಳು;ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿದಂತೆ ವಿವಿಧ ರಾಜ್ಯಗಳ ರಾಜಕಾರಣಿಗಳಿಗೆ ದೇವಿ ಶ್ರೀರಕ್ಷೆ…

Share

ಪ್ರತಿ ವರ್ಷ ಮಣ್ಣೆತ್ತಿನ ಅಮಾವಾಸ್ಯೆಯಂದು ಶ್ರೀ ದುರ್ಗಾದೇವಿ ಜಾತ್ರೆ ನಡೆಯುತ್ತೆ. ಈ ದೇವಿಯ ಮಹಾತ್ಮೆ ಅಷ್ಟಿಷ್ಟಲ್ಲ‌, ಆ ಕಾರಣಕ್ಕಾಗಿಯೇ ಈ ದೇವಿಯ ದರ್ಶನಕ್ಕೆ ಕೇವಲ ರಾಜ್ಯದ ರಾಜಕಾರಣಿಗಳು ಮಾತ್ರವಲ್ಲ ಅನ್ಯ ರಾಜ್ಯದ ರಾಜಕಾರಣಿಗಳು ಬಂದು ದೇವಿ ಶ್ರೀರಕ್ಷೆ ಪಡೆಯುತ್ತಾರೆ. ಇಲ್ಲಿ ಬಂದು ತಾವು ಭಕ್ತಿಯಿಂದ ಬೇಡಿಕೊಂಡರೆ ಅವರ ಇಷ್ಟಾರ್ಥಗಳೆಲ್ಲವೂ ಇಡೇರುತ್ತದೆ ಎಂಬುದು ಜನರ, ಭಕ್ತರ ನಂಬಿಕೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್ ಟಿ 1 ರಲ್ಲಿ ಪ್ರತಿ ವರ್ಷ ಮಣ್ಣೆತ್ತಿನ ಅಮಾವಾಸ್ಯೆಯಂದು ದುರ್ಗಾದೇವಿ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಬಣೆಯಿಂದ ನಡೆಯುತ್ತದೆ. ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಅನ್ಯರಾಜ್ಯದ ಪ್ರಭಾವಿ ನಾಯಕರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ‌ ಪಡೆದು ಹರಕೆ ಹೊತ್ತುಕೊಳ್ಳುತ್ತಾರೆ. ಇನ್ನೂ ಇಲ್ಲಿಗೆ ಬಂದ ರಾಜಕಾರಣಿಗಳು ಏನೇ ಬೇಡಿಕೊಂಡರೂ ಅವರ ಇಷ್ಟಾರ್ಥ ಇಡೇರಿ‌ ರಾಜಕಾರಣದಲ್ಲಿ ‌ಮತ್ತಷ್ಟು ಉತ್ತುಂಗಕ್ಕೆ ಏರುತ್ತಾರೆ ಎಂಬುದು ರಾಜಕಾರಣಿಗಳ ನಂಬಿಕೆ. ಕಲಬುರ್ಗಿ ಮಾಜಿ ಸಂಸದ ಉಮೇಶ ಜಾಧವ್, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯಕ, ಗೋವಾ ಶಾಸಕ ಮೈಕಲ್ ಲೊಬೋ ಸೇರಿದಂತೆ ಹಲವು ರಾಜ್ಯದ ರಾಜಕಾರಣಿಗಳು ಭಾಗಿಯಾಗಿದ್ದರು…

ಇನ್ನೂ ಎರಡು ವರೆ ಸಾವಿರ ಜನಸಂಖ್ಯೆ ಇರುವ ಈ ಸೋಮದೇವರಹಟ್ಟಿ ತಾಂಡಾದಲ್ಲಿರುವ ದೇವಾಲಯಕ್ಕೆ ಹಿಂದೆ ಮಾಜಿ ರಾಷ್ಟ್ರಪತಿ ಪ್ರತಿಭಾಸಿಂಗ ಪಾಟೀಲ ಅವರು ಬಂದು ಹೋಗಿದ್ದಾರೆ. ಅದೇ ತರಹ ಇಲ್ಲಿಯವರೆಗೆ ಸಾಕಷ್ಟು ಜನ ರಾಜಕಾರಣಿಗಳು ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡು ಹೋಗುತ್ತಾರೆ. ಅದರಲ್ಲೂ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ, ಸುಶೀಲ ಕುಮಾರ ಶಿಂಧೆ, ದಿವಂಗತ. ಅಂಬರೀಷ, ಗೋಪಿನಾಥ ಮುಂಡೆ, ಸಂಜಯ ಪಾಟೀಲ ಸೇರಿದಂತೆ ಹಲವು ಜನ ಐಪಿಎಸ್, ಐಐಎಸ್, ನ್ಯಾಯಾಧೀಶರು, ಅಧಿಕಾರಿಗಳು ಸಹಿತ ಇಲ್ಲಿಗೆ ಬಂದು ಹೋಗಿದ್ದಾರೆ. ಜಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಜನರು ದೇವರ ದರ್ಶನಾಶಿರ್ವಾದ ಪಡೆದು ದೇವಿಯ ಕೃಪೆಗೆ ಪಾತ್ರರಾದರು…

ದುರ್ಗಾದೇವಿಯ ಮಹಿಮೆ ಹಿನ್ನಲೆ ರಾಜಕಾರಣಿಗಳು ಹೆಚ್ಚಿನ‌ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ‌ ಆಶಿರ್ವಾದ ಪಡೆಯುತ್ತಾರೆ. ಇನ್ನೂ ದೇವಿಯ ಮಹಿಮೆಯ ಕಾರಣ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿರುವದು ದೇವಿಯ ಶಕ್ತಿಯೇ ಇದಕ್ಕೆ ಕಾರಣ…

ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ…

Tags:

error: Content is protected !!