Uncategorized

ಬಾಗಲಕೋಟೆ DCC ಬ್ಯಾಂಕ್‌ ಮ್ಯಾನೇಜರ್‌ನಿಂದ 65 ಲಕ್ಷ ದೋಖಾ: ಕೊನೆಗೂ ಎಫ್‌ಐಆರ್ ದಾಖಲು!

Share

ಬಾಗಲಕೋಟೆ ಜಿಲ್ಲೆಯ ಲೋಕಾಪುರ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್‌ನಲ್ಲಿದ್ದ 65 ಲಕ್ಷ ರೂಪಾಯಿ ಹಣವನ್ನು ದೋಚಿ ಮ್ಯಾನೇಜರ್ ಎಸ್ಕೇಪ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆಯ ಲೋಕಾಪುರ ಡಿಸಿಸಿ ಬ್ಯಾಂಕ್ ಶಾಖೆಯ ಮ್ಯಾನೇಜರ್ ಗುರುರಾಜ್ ಎಂಬಾತ ಬ್ಯಾಂಕ್ ಖಾತೆಯಲ್ಲಿದ್ದ 65 ಲಕ್ಷ ರೂಪಾಯಿಯನ್ನು ಚೆಕ್ ಮೂಲಕ ಮುಧೋಳದ ಐಡಿಎಫ್‌ಸಿ ಬ್ಯಾಂಕ್‌ನಲ್ಲಿದ್ದ ತನ್ನ ಸ್ವಂತ ಉಳಿತಾಯ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ಕೃತ್ಯ ನಡೆದು ಮೂರೂವರೆ ತಿಂಗಳು ಕಳೆದರೂ ಕೇಂದ್ರ ಶಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದು, ಸ್ವತಃ ಬಾಗಲಕೋಟೆ ಎಸ್ಪಿಯವರೇ ಮಾಹಿತಿ ಕೇಳಿ ದೂರು ನೀಡುವಂತೆ ಸೂಚಿಸಿದರೂ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಕಳೆದ ಮಾರ್ಚ್ 31 ರಿಂದ ರಜೆಯಲ್ಲಿದ್ದ ಮ್ಯಾನೇಜರ್, ವಿಡಿಯೋ ಕಾನ್ಫರೆನ್ಸ್ ಸಭೆಗೂ ಹಾಜರಾಗಿದ್ದರೂ ಹೆದರದೇ ಇದ್ದ ಬ್ಯಾಂಕ್ ಆಡಳಿತ ಮಂಡಳಿ ಕೊನೆಗೂ ಎಚ್ಚೆತ್ತುಕೊಂಡು ಲೋಕಾಪುರ ಠಾಣೆಯಲ್ಲಿ ದೂರು ನೀಡಿದೆ. ಸದ್ಯ ಕಳೆದ ಒಂದು ವಾರದಿಂದ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವ ಮ್ಯಾನೇಜರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Tags:

error: Content is protected !!