Chikkodi

ಚಿಕ್ಕೋಡಿ ತಾಲೂಕಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ಹೊಲ-ಗದ್ದೆಗಳು, ರಸ್ತೆಗಳ ಮೇಲೆ ಹರಿದ ನೀರು

Share

ತಾಲೂಕಿನಾದ್ಯಂತ ನಿನ್ನೆ ರಾತ್ರಿ ಇಡೀ ಎಡೆಬಿಡದೆ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದಾಗಿ ತಾಲೂಕಿನಾದ್ಯಂತ ಹೊಲಗದ್ದೆಗಳು‌ ಜಲಾವೃತಗೊಂಡ್ಡು ರಸ್ತೆ ತುಂಬೆಲ್ಲ ನೀರು ಹರಿದಿವೆ.

ಧಾರಾಕಾರವಾಗಿ ಸುರಿದ ಮಳೆಗೆ ತಾಲೂಕಿನ ಪ್ರಮುಖ ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಹೊಲ-ಗದ್ದೆಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ಇತ್ತೀಚೆಗಷ್ಟೇ ಬಿತ್ತನೆ ಮಾಡಿದ್ದ ಕಬ್ಬು, ಸೋಯಾಬೀನ್ ಹಾಗೂ ಇತರ ಮುಂಗಾರು ಬೆಳೆಗಳು ನೀರಿನಲ್ಲಿ ಮುಳುಗಿವೆ. ಇದರಿಂದಾಗಿ ರೈತರು ತೀವ್ರ ನಷ್ಟದ ಭೀತಿಯಲ್ಲಿದ್ದಾರೆ. “ಮಳೆ ಹೀಗೆಯೇ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಪಟ್ಟಣ ಹಾಗೂ ಗ್ರಾಮೀಣ ಭಾಗದ ಚರಂಡಿಗಳು ಮಳೆನೀರನ್ನು ತಡೆದುಕೊಳ್ಳಲಾಗದೆ ರಸ್ತೆಗಳ ಮೇಲೆ ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಪ್ರಮುಖ ರಸ್ತೆಗಳು ಹಾಗೂ ಸಂಪರ್ಕ ಕಲ್ಪಿಸುವ ಮಾರ್ಗಗಳು ಹಳ್ಳಗಳಂತಾಗಿ ಮಾರ್ಪಟ್ಟಿವೆ.ರಸ್ತೆಗಳ ಮೇಲೆ ಮೊಣಕಾಲಿನುದ್ದಕ್ಕೆ ನೀರು ನಿಂತಿರುವುದರಿಂದ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

Tags:

error: Content is protected !!