ಬೈಲಹೊಂಗಲ ನಗರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಹಜರತ್ ಸೈಯ್ಯದ ಹಾಫೀಜ ಬರೀ ಷಾ ವಲಿ (ರ.ಅ.) ಅವರ ಪವಿತ್ರ ಸಂದಲ್ ಹಾಗೂ ಉರುಸ್ ಕಾರ್ಯಕ್ರಮ ನಾಳೆ (ಜೂನ್ 18) ಸಂಜೆ 7 ಗಂಟೆಗೆ ಅದ್ದೂರಿಯಾಗಿ ಜರುಗಲಿದೆ.


ಬೈಲಹೊಂಗಲ ಪಟ್ಟಣದ ದೊಡ್ಡಕೆರೆಯ ಪಕ್ಕದಲ್ಲಿರುವ ಪವಿತ್ರ ದರ್ಗಾದಲ್ಲಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸೂಫಿ ಸಂತರು, ಧರ್ಮಗುರುಗಳು ಹಾಗೂ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ.
ನಾಡಿನ ಸುಖ-ಶಾಂತಿ, ಸೌಹಾರ್ದತೆ ಮತ್ತು ದೇಶದ ಅಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಫಕ್ಕೀರರಿಂದ ಪವಾಡ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಪವಿತ್ರ ಹಜ್ ಯಾತ್ರೆ ಮುಗಿಸಿಕೊಂಡು ಬಂದ ಹಾಜಿಗಳಿಗೆ, ಗಣ್ಯ ವ್ಯಕ್ತಿಗಳಿಗೆ ಹಾಗೂ ವಿವಿಧ ಧರ್ಮಗುರುಗಳಿಗೆ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಭಾಗವಹಿಸಿ ಹಜರತ್ ಹಾಫೀಜ ಬರೀ ಷಾ ವಲಿ ಬಾಬಾ ಅವರ ಆಶೀರ್ವಾದ ಪಡೆಯುವಂತೆ ಹಜರತ್ ಹಾಫೀಜ ಬರೀ ಷಾ ವಲಿ ಖಾನಕಾ ಮತ್ತು ಮಸೀದಿ ಸಮಿತಿ ಹಾಗೂ ದರ್ಗಾ ಉರುಸ್ ಸಮಿತಿಯವರು ಮನವಿ ಮಾಡಿದ್ದಾರೆ.
