ಕಿತ್ತೂರು ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಈರ್ವರು ಕಳ್ಳರನ್ನು ಕಿತ್ತೂರಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಬಂದಿಸಿದ್ದಾರೆ.

ಇತ್ತೀಚೆಗೆ ಕಿತ್ತೂರು ಸಮೀಪದ ಅವರಾದಿ ಹಾಗೂ ಸಂಗೋಳ್ಳಿ ಗ್ರಾಮಗಳಲ್ಲಿ ನಡೆದ ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಹೊಳಿ ನಾಗಲಾಪುರ ಗ್ರಾಮದ ಪತ್ರಯ್ಯ,ನಿಂಗಯ್ಯ,ಹಿರೇಮಠ ಹಾಗು ಬೈಲಹೊಂಗಲ ಗುಂಡ್ಲೂರ ಚಾಳ್ ನ ಅನಿಲಕುಮಾರ ಹಿರೇಮಠ ಆರೋಪಿಗಳಾಗಿದ್ದು ಇರ್ವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
ಕಳ್ಳರಿಂದ 60 ಗ್ರಾಮ್ ಬಂಗಾರ,ಒಂದು ದ್ವಿಚಕ್ರ ವಾಹನ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಡಿ, ವಯ್, ಎಸ್, ಪಿ, ವೀರಯ್ಯ ಹಿರೇಮಠ ತಿಳಿಸಿದ್ದಾರೆ.
ಸಿ, ಪಿ, ಐ, ಶಿವಾನಂದ ಗುಡಗನಟ್ಟಿ ,ಪಿಎಸ್ಐ ಭರತ್, ಎಸ್,ಗಂಗಾಧರ ಹಂಪಣ್ಣವರ ಹಾಗು ಇನ್ನೂ ಪೊಲೀಸ್ ಸಿಬ್ಬಂದಿಗಳಾದ ಲಿಂಗರಾಜ ಗಳಿಗಿ. ಸುನಿಲ್ ಮುರಗೋಡ. ಅದೃಷ್ ಚಿಕ್ಕೇರಿ. ಶರೀಫ್ ದಪೇದಾರ ನಾಗರಾಜ್ ಕಡಗನ್ನವರ್ ಮಂಜುನಾಥ್ ಕಂಬಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
