Nippani

ಗೋರಕ್ಷಕ ಸಮಿತಿ-ಸದಲಗಾ ಪೊಲೀಸರ ಜಂಟಿ ಕಾರ್ಯಾಚರಣೆ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹಸುಗಳ ರಕ್ಷಣೆ; ಇಬ್ಬರ ಬಂಧನ

Share

ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣದಲ್ಲಿ
ಸ್ಥಳೀಯ ಗೋರಕ್ಷಕ ಸಮಿತಿ, ಶಿವಪ್ರತಿಷ್ಠಾನ ಹಿಂದುಸ್ಥಾನ ಸಂಘಟನೆಯ ಕಾರ್ಯಕರ್ತರು ಹಾಗೂ ಸದಲಗಾ ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮೂರು ಹಸುಗಳನ್ನು ರಕ್ಷಿಸಲಾಗಿದೆ.

ವಡಗಾಂವ ಮಾರ್ಗವಾಗಿ ಟೆಂಪೋದಲ್ಲಿ (KA-23 B 3845) ಹಸುಗಳನ್ನು ಕೊಂಡೊಯ್ಯುತ್ತಿದ್ದಾಗ ಕಾರ್ಯಕರ್ತರು ಬೆನ್ನಟ್ಟಿ ತಡೆದಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಸದಲಗಾ ಪಿಎಸ್ಐ ಶಿವಕುಮಾರ್ ಬಿರಾದಾರ್ ನೇತೃತ್ವದ ತಂಡ ಹಸುಗಳನ್ನು ರಕ್ಷಿಸಿ, ಸದಲಗಾದ ಗೋಶಾಲೆಗೆ ರವಾನಿಸಿದೆ.

ಘಟನೆಗೆ ಸಂಬಂಧಿಸಿದಂತೆ ಶಬ್ಬೀರ್ ಸೈಪನ್ ಶೇಖ್ ಮತ್ತು ಬಾಪುಸಾಬ್ ಲಾಲಾಸಾಬ್ ಶೇಖ್ ಎಂಬ ಇಬ್ಬರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ವಾಹನವನ್ನು ಜಪ್ತಿ ಮಾಡಲಾಗಿದೆ.

ಯಾರಿಗಾದರೂ ಗೋವಂಶದ ಸಾಗಾಟ ಕಂಡುಬಂದಲ್ಲಿ ತಕ್ಷಣವೇ ಪೊಲೀಸರನ್ನು ಅಥವಾ ಗೋರಕ್ಷಕ ಸಮಿತಿಯನ್ನು ಸಂಪರ್ಕಿಸಬೇಕು” ಎಂದು ಪ್ರಮುಖರಾದ ಅಕ್ಷಯ್ ಪವಾರ್ ಕರೆ ನೀಡಿದ್ದಾರೆ.

ಸಮಯಪ್ರಜ್ಞೆ ಮೆರೆದ ಕಾರ್ಯಕರ್ತರು ಹಾಗೂ ತಕ್ಷಣ ಕಾರ್ಯಪ್ರವೃತ್ತರಾದ ಸದಲಗಾ ಪೊಲೀಸರ ದಕ್ಷ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Tags:

error: Content is protected !!