ನೆರೆಯ ಗೋವಾದಿಂದ ಮಹಾರಾಷ್ಡ್ರದ ಸೋಲಾಪುರಕ್ಕೆ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 74.68 ಲಕ್ಷ ರೂ. ಮೌಲ್ಯದ ವಿವಿಧ ಬ್ರಾಂಡ್ನ ಮದ್ಯ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ವಿಜಯಪುರ ನಗರದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರ ಉಪ ವಿಭಾಗದ ಪೊಲೀಸರು ಗಸ್ತಿನಲ್ಲಿದ್ದಾಗ ಮಂಗಳವಾರ ನಸುಕಿನ 5.30ರ ಸುಮಾರಿಗೆ ಕೊಲ್ದಾರ ನಾಕಾ ಹತ್ತಿರ ಅಕ್ರಮವಾಗಿ ಸರಾಯಿ ತುಂಬಿದ ಲಾರಿಯನ್ನು ನಿಲ್ಲಿಸಲಾಗಿತ್ತು, ತಕ್ಷಣ ಲಾರಿಯನ್ನು ಪರಿಶೀಲಿಸಿದಾಗ ಗೋವಾದಿಂದ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕರಾದ ಗದಗ ಜಿಲ್ಲೆಯ ಜಲ್ಲಿಗೇರಿಯ ಶ್ರೀನಿವಾಸ ಮೀಸಿ, ವಿಜಯಪುರ ಗಾಂಧಿನಗರದ ಹುಸೇನ್ ಸಾಬ್ ಮುಲ್ಲಾ, ಸೋಲಾಪುರದ ಸಿದ್ದರಾಮ್ ಡಾಲೆ, ಹಾಗೂ ವಿಜಯಪುರ ಕಾಳಿಕಾ ನಗರದ ಬಸವರಾಜ್ ಭಜಂತ್ರಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. ಪ್ರಸ್ತುತ ವಶಪಡಿಸಿಕೊಂಡ ಮದ್ಯದ ಮೌಲ್ಯವನ್ನು ಗೋವಾಕ್ಕೆ ರಾಜ್ಯಕ್ಕೆ ಹೋಲಿಸಿದಲ್ಲಿ ಅದರ ಒಟ್ಟು ಮೌಲ್ಯವು 74,68,560 ರೂ. ಆಗುತ್ತದೆ.


ಅದೇ ಮೌಲ್ಯವು ಕರ್ನಾಟಕಕ್ಕೆ ಲೆಕ್ಕ ಮಾಡಿದರೆ ಒಟ್ಟು 1,36,82,880 . ನೀಡಿದರು. ಆರೋಪಿಗಳು ತಾಡಪತ್ರೆಯಿಂದ ಮುಚ್ಚಿದ ಲಾರಿಯನ್ನು ಪರಿಶೀಲಿಸಿದಾಗ ಲಾರಿಯ ಹಿಂಭಾಗದಲ್ಲಿ ಮತ್ತು ಮೇಲ್ಬಾಗದಲ್ಲಿ ಎರೆ ಹುಳುವಿನ ಗೊಬ್ಬರದ ಚೀಲುಗಳು ಕಂಡು ಬಂದಿದ್ದು, ಅದನ್ನು ತೆಗೆದು ಒಳಗೆ ನೋಡಿದಾಗ ವಿವಿಧ ಬ್ರಾಂಡ್ನ ಮದ್ಯದ ಬಾಟಲ್ಗಳು ಇರುವ ರಟ್ಟಿನ ಬಾಕ್ಸ್ಗಳು ಕಂಡು ಬಂದಿವೆ ಎಂದರು. ಸರಾಯಿ ಬಾಕ್ಸ್ಗಳನ್ನು ಸಾಗಾಟ ಮಾಡುವ ಬಗ್ಗೆ ಹಾಗೂ ಖರೀದಿಯ ಕಾಗದ ಪತ್ರಗಳ ಬಗ್ಗೆ ಕೇಳಿದಾಗ ಆರೋಪಿಗಳು ಯಾವುದೇ ರೀತಿಯ ಕಾಗದ ಪತ್ರಗಳು ಇರುವುದಿಲ್ಲವಾಗಿ ಹಾಗೂ ಈ ಸರಾಯಿ ಬಾಕ್ಸ್ಗಳನ್ನು ಗೋವಾದ ಪಣಜಿಯಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ ಎಂದು ವಿವರಿಸಿದರು. ಸರಾಯಿ ತುಂಬಿದ ಲಾರಿಯನ್ನು ಎಲ್ಲಿಗೆ ತರಬೇಕು, ಎಲ್ಲಿ ನಿಲ್ಲಿಸಬೇಕು ಎಂದು ಚಾಲಕರಿಗೆ ಗೂಗಲ್ ಲೊಕೇಷನ್ ಮೂಲಕ ಸೂಚಿಸಲಾಗುತ್ತಿತ್ತು. ಅವರು ಸೂಚಿಸಿದ ಸ್ಥಳದಲ್ಲಿ ಲಾರಿ ನಿಲ್ಲಿಸಬೇಕಿತ್ತು. ಮುಂದಕ್ಕೆ ಬೇರೊಬ್ಬರು ಆ ಲಾರಿಯನ್ನು ಕೊಂಡೊಯ್ಯುತ್ತಿದ್ದರು. ಹೀಗಾಗಿ ಅಕ್ರಮ ಸರಾಯಿ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದು ಇನ್ನೂ ಖಚಿತವಾಗಿಲ್ಲ, ಯಾರಿಗೆ ಸೇರಿದ್ದು ಎಂಬುದು ತೆಯಿಂದ ತಿಳಿಯಬೇಕಿದೆ ಎಂದು ತಿಳಿಸಿದರು.

ಆರೋಪಿಗಳು ಯಾವುದೇ ರೀತಿಯ ಕಾಗದ ಪತ್ರಗಳು ಇರುವುದಿಲ್ಲವಾಗಿ ಹಾಗೂ ಈ ಸರಾಯಿ ಬಾಕ್ಸ್ಗಳನ್ನು ಗೋವಾದ ಪಣಜಿಯಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ ಎಂದು ವಿವರಿಸಿದರು. ಸರಾಯಿ ತುಂಬಿದ ಲಾರಿಯನ್ನು ಎಲ್ಲಿಗೆ ತರಬೇಕು, ಎಲ್ಲಿ ನಿಲ್ಲಿಸಬೇಕು ಎಂದು ಚಾಲಕರಿಗೆ ಗೂಗಲ್ ಲೊಕೇಷನ್ ಮೂಲಕ ಸೂಚಿಸಲಾಗುತ್ತಿತ್ತು. ಅವರು ಸೂಚಿಸಿದ ಸ್ಥಳದಲ್ಲಿ ಲಾರಿ ನಿಲ್ಲಿಸಬೇಕಿತ್ತು. ಮುಂದಕ್ಕೆ ಬೇರೊಬ್ಬರು ಆ ಲಾರಿಯನ್ನು ಕೊಂಡೊಯ್ಯುತ್ತಿದ್ದರು. ಹೀಗಾಗಿ ಅಕ್ರಮ ಸರಾಯಿ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದು ಇನ್ನೂ ಖಚಿತವಾಗಿಲ್ಲ, ಯಾರಿಗೆ ಸೇರಿದ್ದು ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ವಿಜಯಪುರ ಉಪವಿಭಾಗದ ಡಿಎಸ್ಪಿ ನಾಗರಾಜ್ ಜೆ. ಹಾಗೂ ಜಲನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಮಹೇಶ ಸಂಖ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.
