Belagavi

ಜೂನ್ 28 ರಂದು ಬಸವಕಲ್ಯಾಣಕ್ಕೆ ಕನ್ಹೇರಿ ಶ್ರೀಗಳ ಪ್ರವೇಶ ನಿರ್ಬಂಧಿಸಿ: ಬೆಳಗಾವಿಯಲ್ಲಿ ಬಸವಪರ ಒಕ್ಕೂಟದಿಂದ ಸರ್ಕಾರಕ್ಕೆ ಆಗ್ರಹ

Share

ಜೂನ್ 28 ರಂದು ಬಸವ ಕಲ್ಯಾಣದಲ್ಲಿ ವೈದಿಕ ಹಿಂದೂ ಸಮಾವೇಶಕ್ಕೆ ಮುಂದಾಗಿರುವ ಕನ್ಹೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಜೀಗಳ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಬಸವಪರ ಒಕ್ಕೂಟ ಸಂಘವು ಆಗ್ರಹಿಸಿದೆ.

ಜೂನ್ 28 ರಂದು ಬಸವ ಕಲ್ಯಾಣದಲ್ಲಿ ವೈದಿಕ ಹಿಂದೂ ಸಮಾವೇಶಕ್ಕೆ ಮುಂದಾಗಿರುವ ಕನ್ಹೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಜೀಗಳ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಬಸವಪರ ಒಕ್ಕೂಟ ಸಂಘವು ಇಂದು ಬೆಳಗಾವಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಜಾಗತೀಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ್ ರೊಟ್ಟಿ ಅವರು ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮಿಜೀಗಳು ಅತ್ಯಂತ ಸಕ್ರಿಯವಾಗಿ ಸಭೆ ಸಮಾರಂಭಗಳನ್ನು ಮಾಡುತ್ತಿದ್ದು, ಲಿಂಗಾಯಿತ ಮಹಾಸಭೆಯ ಒಕ್ಕೂಟದ ಮಹಾಸ್ವಾಮಿಜೀಗಳು, ಗುರುಹಿರಿಯರನ್ನು ಅಸಂವಿಧಾನಿಕ ಶಬ್ದಗಳನ್ನು ಬಳಸಿ ಅವಹೇಳನ ಮಾಡಿ, ತೇಜೋವಧೆ ಮಾಡುತ್ತಿದ್ದಾರೆ. ನ್ಯಾಯಾಲಯದ ಮೋರೆ ಹೋದಾಗ ಸರ್ವೋಚ್ಛ ನ್ಯಾಯಾಲಯವು ಉತ್ತಮ ಪ್ರಜೆಯಾಗಿ ಇಂತಹ ಕೃತ್ಯಗಳನ್ನು ಮಾಡದಂತೆ ಹೇಳಿದರು. ಮತ್ತೇ ಅದನ್ನೇ ಮುಂದುವರೆಸಿದ್ದಾರೆ. ಬಸವಣ್ಣನವರ ಅನುಭವ ಮಂಟಪದ ಸ್ಥಳದಲ್ಲಿ ಹಿಂದೂ ಸಭೆಯನ್ನು ಆಯೋಜಿಸಿ ಸಮಾಜದಲ್ಲಿ ಕೋಮು ಗಲಭೆ, ಅಶಾಂತಿ ನಿರ್ಮಿಸಲು ಮುಂದಾಗಿದ್ದಾರೆ. ಬಸವಾದಿ ಶರಣರ ಹೆಸರಲ್ಲಿ ಶರಣರ ಆಶಯಕ್ಕೆ ವಿರುದ್ಧವಾಗಿ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿದ್ದು, ಎಲ್ಲ ಲಿಂಗಾಯಿತ ಮತ್ತು ಬಸವಪರ ಸಂಘಟನೆಗಳ ವಿರೋಧವಿದೆ ಎಂದರು. ಕೋಮು ಗಲಭೆಗೆ ಪ್ರಚೋದನೆ ಕೊಡುವ ಸಮಾವೇಶವನ್ನು ನಿಷೇಧಿಸಿ, ಬಸವ ಕಲ್ಯಾಣಕ್ಕೆ ಕನ್ಹೇರಿ ಶ್ರೀಗಳ ಪ್ರವೇಶವನ್ನು ಪ್ರತಿಬಂಧಿಸಬೇಕೆಂದರು.

ಕಾಡಸಿದ್ಧೇಶ್ವರರ ಪರಂಪರೆ ಅವೈದಿಕ. ಆದರೂ ಕನ್ಹೇರಿ ಶ್ರೀಗಳು ವೈದಿಕ ಸಮಾವೇಶಗಳನ್ನು ಮಾಡುವ ಮೂಲಕ ತಪ್ಪು ದಾರಿಗೆ ಏಳೆಯುತ್ತಾರೆ. ಪ್ರಮೋದ ಮುತಾಲಿಕ ಕೂಡ ಇತ್ತಿಚೆಗೆ ಮಾತನಾಡುತ್ತಿದ್ದಾರೆ. ಲಿಂಗಾಯಿತರನ್ನು ಕೆರಳಿಸದಿರಿ. ಹಿಂದೂ ಸಮಾವೇಶವನ್ನು ಶ್ರೀಗಳು ಮಾಡಲಿ. ಆದರೇ, ಬಸವಾದಿ ಶರಣರನ್ನು ಅಲ್ಲೆಗೆಳೆಯಬೇಡಿ. ಜೂನ್ 28 ರಂದು ಬಸವ ಕಲ್ಯಾಣಕ್ಕೆ ಬರುತ್ತಿರುವ ಕನ್ಹೇರಿ ಶ್ರೀಗಳನ್ನು ನಿರ್ಬಂಧಿಸಬೇಕೆಂದು ಶಂಕರ್ ಗುಡಸ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಸವಪರ ಒಕ್ಕೂಟ ಸಂಘದ ಪದಾಧಿಕಾರಿಗಳು ಮತ್ತು ಬಸವಪರ ಸಂಘಟನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!