ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದವರ ವಿರುದ್ಧ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋದಲ್ಲಿ ಸಂಸದ ಜಿಗಜಿಣಗಿ ಹಾಗೂ ಖರ್ಗೆ ಬೆಂಬಲಿಗನ ನಡುವೆ ವಾಗ್ವಾದ ನಡೆದಿದೆ. ನಾನು ದಲಿತನಾಗಿದ್ದರೂ ಬಿಜೆಪಿಯ ಲ್ಲಿದ್ದೇನೆ. ಆರ್‌ಎಸ್‌ಎಸ್ ಗೆ ನಿಂದನೆ ಮಾಡಿದರೆ ಯಾರೂ ದೊಡ್ಡವರಾಗುವುದಿಲ್ಲ” ಎಂದು ಜಿಗಜಿಣಗಿ ಹೇಳಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಪ್ರಶ್ನಿಸುವ ಹಕ್ಕು ಸಚಿವ ಪ್ರಿಯಾಂಕ್ ಖರ್ಗೆಗೆ ಇಲ್ಲ ಎಂದು ಹೇಳಿರುವ ಜಿಗಜಿಣಗಿ, ಈ ಕುರಿತು ತಾವು ಖರ್ಗೆ ಅವರಿಗೂ ಸಲಹೆ ನೀಡಿರುವುದಾಗಿ ತಿಳಿಸಿದ್ದಾರೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

