Khanapur

ಖಾನಾಪುರದ ಡೋಂಗರಗಾವದಲ್ಲಿ ಐದು ಕಾಡಾನೆಗಳ ಹಾವಳಿ: ಅರಣ್ಯ ಅಧಿಕಾರಿಗಳೊಂದಿಗೆ ಮಾಜಿ ಶಾಸಕ ಅರವಿಂದ್ ಪಾಟೀಲ್ ಪರಿಶೀಲನೆ!

Share

ಖಾನಾಪುರ ತಾಲೂಕಿನ ಡೋಂಗರಗಾವ ಪರಿಸರದಲ್ಲಿ ಬರೋಬ್ಬರಿ ಐದು ಕಾಡಾನೆಗಳ ತಂಡ ಬೀಡುಬಿಟ್ಟಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಖಾನಾಪುರದ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರವಿಂದ್ ಪಾಟೀಲ್ ಅವರು ಅರಣ್ಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಖಾನಾಪುರ ತಾಲೂಕಿನ ಡೋಂಗರಗಾವ ಪರಿಸರದಲ್ಲಿ ಐದು ಕಾಡಾನೆಗಳ ತಂಡ ಪ್ರತ್ಯಕ್ಷವಾಗಿ ಸಾರ್ವಜನಿಕ ವಲಯದಲ್ಲಿ ಭೀತಿ ಮೂಡಿಸಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಖಾನಾಪುರದ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ಭೀಮಗಡ ವನ್ಯಜೀವಿ ಸಂರಕ್ಷಣಾ ಧಾಮದ ಆರ್‌ಎಫ್‌ಒ ನದಾಫ್ ಮತ್ತು ಲೋಂಡಾ ವಲಯದ ಆರ್‌ಎಫ್‌ಒ ತೇಜ್ ಅವರೊಂದಿಗೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಸ್ಥಳೀಯ ರೈತರ ಬೆಳೆ ಹಾನಿಯನ್ನು ವೀಕ್ಷಿಸಿದ ಅವರು, ಬಾಧಿತ ರೈತರಿಗೆ ಶೀಘ್ರವಾಗಿ ಯೋಗ್ಯ ರೀತಿಯ ಪರಿಹಾರ ಒದಗಿಸಬೇಕು ಮತ್ತು ಈ ಆನೆಗಳ ಹಿಂಡನ್ನು ತಕ್ಷಣವೇ ಮರಳಿ ಅರಣ್ಯ ಪ್ರದೇಶಕ್ಕೆ ಓಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಆಗ್ರಹಿಸಿದರು. ಇದೇ ವೇಳೆ, ದಿನನಿತ್ಯದ ರೈತಾಪಿ ಕಸುಬಿಗೆ ಹಾಗೂ ತೋಟ-ಗದ್ದೆಗಳಿಗೆ ಹೋಗಿ ಬರುವಾಗ ಸಾರ್ವಜನಿಕರು ಮತ್ತು ರೈತರು ಹೆಚ್ಚಿನ ಜಾಗೃತಿ ವಹಿಸಿ, ಎಚ್ಚರಿಕೆಯಿಂದ ಇರಬೇಕೆಂದು ಅರವಿಂದ್ ಪಾಟೀಲ್ ಅವರು ವಿಶೇಷ ಸಲಹೆ ನೀಡಿದ್ದಾರೆ.

Tags:

error: Content is protected !!