ಆ್ಯಂಕರ್: ಪ್ರಧಾನಿ ನರೇಂದ್ರ ಮೋದಿ ಅವರ ಮಿತ ವ್ಯಯ ಸೂತ್ರ ಪಾಲನೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇವರು ಕಾರು ಪ್ರಯಾಣ ತ್ಯಜಿಸಿ ಇಲೆಕ್ಟ್ರಿಕ್ ವಾಹನದ ಮೂಲಕ ಸಂಚರಿಸಲು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದಾರೆ.


ಯುದ್ಧದ ಸಂಕಷ್ಟಗಳ ಕಾಲಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಮಿತ ಬಳಕೆ, ಚಿನ್ನ ಖರೀದಿ ಮುಂದೂಡಿಕೆ ಸಲಹೆ ನೀಡಿದ್ದಾರೆ, ಈ ಸಲಹೆ ಪಾಲನೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸಹ ಕಾರಿನ ಬಳಕೆಯನ್ನು ಸಾಕಷ್ಟು ಮಿತಿಗೊಳಿಸಿದ್ದಾರೆ.

ಇಲೆಕ್ಟ್ರಿಕ್ ವಾಹನ ಮೊರೆ ಹೋಗಿದ್ದಾರೆ. ಬೇರೆ ದೇಶದಲ್ಲಿ ಇಂಧನ ಬೆಲೆ ಗಗನಕ್ಕೆ ಹೋಗಿದೆ, ಆದರೆ ಮೋದಿಜಿ ಅವರ ಸಮರ್ಥ ನಾಯಕತ್ವದಲ್ಲಿ ಇಂದನ ಬೆಲೆಯನ್ನು ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ, ಜನತೆಯೂ ಮೋದಿಜಿ ಅವರ ಕೂಗಿಗೆ ಸ್ಪಂದಿಸಿದ್ದಾರೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ತಿಳಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ.
