Kagawad

ಕೆಎಲ್ಇ ಸಂಸ್ಥೆಯ ಶಿರಗುಪ್ಪಿ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅಶ್ವಮೇಧ2 ಕೆ 25 ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

Share

ದೇವರು ಎಲ್ಲಿಗೆ ಇಲ್ಲ ಆದರೂ ತಮಗೆ ಜನ್ಮ ನೀಡಿದ ತಂದೆ ತಾಯಿ ವಿದ್ಯಾನಿಡಿದ ಗುರುಗಳು ಇವರನ್ನು ಭಕ್ತಿಯಿಂದ ಆದರದಿಂದ ಕಂಡು ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿರಿ ಎಂದು ಚಲನಚಿತ್ರ ನಟ ಮಲ್ಲು ಜಮಖಂಡಿ ಶಿರುಗುಪ್ಪಿಯಲ್ಲಿ ಹೇಳಿದರು.

ಕೆಎಲ್ಇ ಶಿಕ್ಷಣ ಸಂಸ್ಥೆಯ ಶಾಖೆಯಾಗಿರುವ ಶಿರಗುಪ್ಪಿಯ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಶ್ವಮೇಧ 2k25 ಪಿಯುಸಿ ಸೆಕೆಂಡ್ ಇಯರ್ ವಾಣಿಜ್ಯ ಪ್ರದರ್ಶನ ಹಾಗೂ ವಾಣಿಜ್ಯ ಜಾಗೃತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಮಲ್ಲು ಜಮಖಂಡಿ ಇವರು ಆಗಮಿಸಿದರು.
ವಿದ್ಯಾರ್ಥಿಗಳಿಗೆ ಸಂದೇಶ ನೀಡುವಾಗ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜನ್ಮ ನೀಡಿದ ತಂದೆ ತಾಯಿ ಹಾಗೂ ವಿದ್ಯಾ ನೀಡಿದ ಗುರುಗಳನ್ನು ಆದರದಿಂದ ಕಾಣಬೇಕು. ವಿದ್ಯಾಭ್ಯಾಸ ಕೊನೆಗೊಂಡು ಬಳಿಕ ತಾವು ಒಬ್ಬ ಆದರ್ಶ ನಾಗರಿಕರಾಗಿ ಹೊರಹೊಮ್ಮಬೇಕು. ಇದೇ ನನ್ನ ಆಸೆ ಎಂದು ಹೇಳಿದರು.

ಶಿರಗುಪ್ಪಿ ಶಾಖೆಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶಿವಾನಂದ ಪಾಟೀಲ್, ಸಂಚಾಲಕರಾದ ಆರ್ ಎಂ ಪಾಟೀಲ್, ಮಹಾದೇವ್ ಪಾಟೀಲ್, ಪ್ರಾಚಾರ್ಯ ಎಸ್ ಬಿ ಪಾಟೀಲ್ ಇವರು ಮಲ್ಲು ಜಮಖಂಡಿ ಇವರನ್ನು ಸ್ವಾಗತಿಸಿದರು ,ಅವರಿಂದ 10 ಸ್ಪರ್ಧಿಗಳಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಿದರು.

ರವಿವಾರ ಹಾಗೂ ಸೋಮವಾರ ಎರಡು ದಿನ ಮಹಾ ವಿದ್ಯಾಲಯದಲ್ಲಿ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ್ ಕಾಗವಾಡ್ ಅಥಣಿ, ತಾಲೂಕಿನಿಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಾಣಿಜ್ಯ ಪ್ರದರ್ಶನ ಚಿತ್ರಕಲೆ ಗಾಯನ ಸ್ಪರ್ಧೆ ನೃತ್ಯ ಸ್ಪರ್ಧೆ ಮೇಕಿಂಗ್ ಸ್ಥಳ ಛಾಯಾಗ್ರಹ ಮುಂತಾದ ಸ್ಪರ್ಧೆಗಳು ಹಮ್ಮಿಕೊಂಡಿದ್ದರು ಸ್ಪರ್ಧೆಯಲ್ಲಿ 421 ವಿದ್ಯಾರ್ಥಿಗಳು ಸ್ಪರ್ಧಿಸಿದರು,
ಯಶಸ್ವಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶಿವಾನಂದ ಪಾಟೀಲ್
ಮಾತನಾಡಿ ಶಿಕ್ಷಣ ಮಹರ್ಷಿ ಡಾಕ್ಟರ್ ಪ್ರಭಾಕರ್ ಕೋರೆ ಇವರು ಕೆಎಲ್ಇ ಸಂಸ್ಥೆಯಿಂದ ಶಿರುಗುಪ್ಪಿ ಅಂತಹ ಗ್ರಾಮೀಣ ಪರಿಸರದಲ್ಲಿ ಮಹಾವಿದ್ಯಾಲಯ ಶಾಖೆ ಪ್ರಾರಂಭಿಸಿ ಹಳ್ಳಿ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಲಿ ಅದರಲ್ಲಿ ವಿದ್ಯಾರ್ಥಿನಿಯರಿಗೆ ಸಹಾಯವಾಗಲಿ ಈ ಭಾವನೆಯಿಂದ ಶಾಖೆ ಪ್ರಾರಂಭಿಸಿದರು ಒಂದು ಆದರ್ಶ ಸಂಸ್ಥೆ ಎಂದು ಹೊರಹೊಮ್ಮಿದೆ ಇಲ್ಲಿಯ ನೂರಾರು ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ದೇಶ ಹಾಗೂ ರಾಜ್ಯದಲ್ಲಿ ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇದು ಒಂದು ಹೆಮ್ಮೆಯ ವಿಷಯ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್ ಬಿ ಪಾಟೀಲ್ ಮಾತನಾಡಿ ಕೆಎಲ್ಇ ಸಂಸ್ಥೆಯ ಶಿರಗುಪ್ಪಿ ಶಾಖೆಯ ವಿದ್ಯಾರ್ಥಿಗಳು ರಾಜ್ಯ ಹಾಗೂ ದೇಶ ಮಟ್ಟದಲ್ಲಿ ವಿಶೇಷ ಸಾಧನೆ ಮಾಡುತ್ತಿದ್ದಾರೆ ಅವರಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಅಶ್ವಮೇಧ 2k25 ಈ ಕಾರ್ಯಕ್ರಮ ಆಯೋಜಿಸಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲ ತಾಲೂಕಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು, ಚಲನಚಿತ್ರ ನಟ ಮಲ್ಲು ಜಮಖಂಡಿ ಇವರು ವಿದ್ಯಾರ್ಥಿಗಳ ಪ್ರತಿಭೆಯನ್ನು. ಕೊಂಡಾಡಿದರು

ಸಮಾರಂಭದಲ್ಲಿ ಶಿರಗುಪ್ಪಿ ಶಾಖೆಯ ಕಾರ್ಯಾಧ್ಯಕ್ಷರಾದ ಶಿವಾನಂದ ಪಾಟೀಲ್ ಸಂಚಾಲಕರಾದ ಆರ್ ಎಂ ಪಾಟೀಲ್ ಮಹದೇವ ಪಾಟೀಲ್ ಆಯ್ ಎಂ. ಪಾಟೀಲ್ ಪಿ ಐ ಪಾಟೀಲ್, ಎಸ್ ಬಿ ಪಾಟೀಲ್, ಆರ್ ಎಸ್ ಪಾಟೀಲ್ ಎಂ ಬಿ ಪಾಟೀಲ್ ಇವರು ಪಾಲ್ಗೊಂಡಿದ್ದರು
ಸಂಸ್ಥೆಯ ಸಂಯೋಜಕಿರಾದ ಶ್ರೀಮತಿ ಆರ ಎಸ್ ಯಾದವ್, ಆರ ಡಿ ಪವಾರ್ ಮತ್ತು ಏ ಕೆ ಜಯವೀರ, ನಿರೂಪಿಸಿದರು, ಆರ್ ಎಸ್ ಯಾದವ ಸ್ವಾಗತಿಸಿದರು .

Tags:

error: Content is protected !!