ಬೆಳಗಾವಿಯ ಪ್ರಮುಖ ಮಾರುಕಟ್ಟೆಯಲ್ಲಿ ಒಂದಾದ ರವಿವಾರ ಪೇಠನ ಮುಖ್ಯ ರಸ್ತೆಯಲ್ಲಿ ನಗರಸೇವಕ ಜಯತೀರ್ಥ ಸವದತ್ತಿ ಅವರ ವಿಶೇಷ ಪ್ರಯತ್ನದಿಂದ ನಿರ್ಮಿಸಲಾದ ಸುಲಭ ಶೌಚಾಲಯವನ್ನು ಲೋಕಾರ್ಪಣೆಗೊಳಿಸಲಾಯಿತು.
ಬೆಳಗಾವಿಯ ರವಿವಾರ ಪೇಠನ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಿಗಳ ಬಹುದಿನಗಳ ಬೇಡಿಕೆಯಂತೆ ನಗರಸೇವಕ ಜಯತೀರ್ಥ ಸವದತ್ತಿ ಅವರ ವಿಶೇಷ ಶ್ರಮವಹಿಸಿ ಸಾರ್ವಜನಿಕ ಶೌಚಾಲಯ ನಿರ್ವಹಣಾ ಮತ್ತು ನಿರ್ಮಾಣ ಕರ್ನಾಟಕ ಸುಲಭ ಶೌಚಾಲಯ ನೈಮರ್ಲೀಕರಣ ನಗರ, ಗ್ರಾಮೀಣ, ಪಟ್ಟಣ ಮಹಿಳೆಯ ಮತ್ತು ಪುರುಷರ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ ನಿರ್ಮಿಸಲಾದ ಪಾವತಿಸಿ ಮತ್ತು ಬಳಸಿ ಸುಲಭ ಶೌಚಾಲಯವನ್ನು ನಿರ್ಮಿಸಲಾಗಿದ್ದು, ಇಂದು ಲೋಕಾರ್ಪಣೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ನಗರಸೇವಕ ಜಯತೀರ್ಥ ಸವದತ್ತಿ ಅವರು, ರವಿವಾರ ಪೇಠೆಯಲ್ಲಿನ ವ್ಯಾಪಾರಿಗಳ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛ ಭಾರತ ಮಿಷನ್ ಅನುದಾನದಲ್ಲಿ ಈ ಶೌಚಾಲಯವನ್ನು ನಿರ್ಮಿಸಲಾಗಿದೆ. 24 ಗಂಟೆ ಮಹಾನಗರ ಪಾಲಿಕೆ ಇದರ ಸ್ವಚ್ಛತೆಯನ್ನು ಕಾಪಾಡಲಿದ್ದು, ಜನರು ಕೂಡ ಇದರ ಸ್ವಚ್ಛತೆಗೆ ಸಹಕರಿಸಬೇಕು. ಇಲ್ಲಿ ಕೇವಲ ಮೂತ್ರಾಲಯ ಮತ್ತು ಶೌಚಾಲಯವಿರದೇ, ಮಾರುಕಟ್ಟೆಗೆ ರಾತ್ರಿಯ ವೇಳೆ ಭಾರಿ ವಾಹನಗಳನ್ನು ತೆಗೆದುಕೊಂಡು ಬರುವ ಚಾಲಕರ ಸ್ನಾನಕ್ಕೂ ಅವಕಾಶ ನೀಡಿ ಕೊಡಲಾಗಿದ್ದು, ಇದಕ್ಕೆ ಬಿಸಿ ನೀರಿನ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗುತ್ತಿದೆ. ಅಲ್ಲದೇ ಚೇಂಜೆಂಗ್ ರೂಮ್ ಕೂಡ ಇದೆ ಎಂದರು. ಬೈಟ್
ಈ ಸಂದರ್ಭದಲ್ಲಿ ಗುತ್ತಿಗೆದಾರ ಪ್ರದೀಪ್ ತೋರವಿ, ರವಿವಾರ ಪೇಠೆಯ ಪ್ರಮುಖರಾದ ಪ್ರಕಾಶ ಬಾಳೇಕುಂದ್ರಿ ಅಧ್ಯಕ್ಷರು, ಅನೀಲ ಹುಕ್ಕೇರಿ, ದಿಗಂಬರ ತೆಂಡೂಲ್ಕರ್, ಚೇತನ್ ಹುಬಳಿ, ಬಸವರಾಜ್ ಉಪ್ಪಿನ, ಶಿಲ್ಪಾ ಕೇಕರೆ, ವಿಜಯ ಭದ್ರ, ಹೀರಾಲಾಲ್ ಸೋಲಂಕಿ, ಮಿಲೀಂದ್ ನಾರ್ವೇಕರ್, ಚಂದ್ರಕಾಂತ್ ಗುಂಡಕಲ್ಲ, ಮಹಾನಗರ ಪಾಲಿಕೆ ಎಇಇ ಹಣಮಂತ ಕಲಾದಗಿ, ಆದೀಲ್ ಖಾನ್ ಪಠಾಣ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು

