Uncategorized

ಧಾರವಾಡದಲ್ಲಿ 7 ದಿನದ ಗಣೇಶನ ವಿಸರ್ಜನೆ

Share

ಧಾರವಾಡದಲ್ಲಿ ಭಕ್ತಿಯಿಂದ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಕಾರ್ಯ ಮಾಡಿ ವಿಘ್ನ ನಿವಾರಕನ ಕೃಪೆಗೆ ಪಾತ್ರರಾಗಿದ್ದ ಗಣೇಶ ಮಂಡಳಿಗಳು 7ನೇದಿನದ ಗೌರಿ ಪುತ್ರನಿಗೆ ಅದ್ದೂರಿಯಾಗಿ ವಿದಾಯ ಹೇಳಿದ್ದರು. ಮೂರ್ತಿ ವಿಸರ್ಜನೆ ಬಾವಿ ಬಳಿ ತಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಮಿಷನರೇಟ ವ್ಯವಸ್ಥೆಗೆ ಜನ ಮೆಚ್ಚುಗೆಗೆ ಪಾತ್ರವಾಯಿತು.

ಹೌದು ….ಧಾರವಾಡ ವಿವಿಧ ಮುಖ್ಯ ವೃತ ಸೇರಿ ಗಲ್ಲಿಗಳಲ್ಲಿ ಕಳೆದ ಸೆಪ್ಟೆಂಬರ್ 14ರಂದು ಪ್ರತಿಷ್ಠಾಪಿಸಿ ವಿಘ್ನ ನಿವಾರಕನ ಮೂರ್ತಿಗೆ ಕಳೆದ ಭಾನುವಾರ ಅದ್ದೂರಿಯಾಗಿ ವಿದಾಯ ಹೇಳಲಾಯಿತು. ಅದ್ದೂರಿಯಾಗಿ ಗೌರಿ ಪುತ್ರನನ್ನು ಗಣೇಶ ಮಂಡಳಿಗಳು ಮೆರವಣಿಗೆ ಮೂಲಕ ನಗರದ ನುಚ್ಚಂಬ್ಲಿ ಭಾವಿ ತರಲಾಯಿತು. ‌ಧಾರವಾಡದ ಗಾಂಧಿ ಚೌಕ‌ನಿಂದ ವಿವಿಧ ಗಲ್ಲಿ ಸೇರಿ ಮುಖ್ಯ ವೃತಗಳಲ್ಲಿ ಪ್ರತಿಷ್ಠಾಪಿಸಿದ ಮೂರ್ತಿ ಮೆರವಣಿಗೆ ಸರದಿ ಸಾಲಿನಲ್ಲಿ ಬಂದಿದ್ದು, ಮೆರವಣಿಗೆ ಉದ್ದಕ್ಕೂ ಯುವ ಸಮುದಾಯ ಡಿಜೆ ಸದ್ದಿಗೆ ಕುಣಿದು ಕುಪ್ಪಳುಸಿದರು. ಹತ್ತು ಗಂಟೆಯಾಗುತ್ತಿದಂತೆ ಕೆಲವು ಗಣೇಶ ಮಂಡಳಿಗಳು ಡಿಹೆ ಬಂದ್ ಮಾಡಿದವು.‌ ನಂತರ ಮೂರ್ತಿಯನ್ನು ಬಾವಿ ಬಳಿ ತಂದು ಗೌರಿ ಪುತ್ರನಿಗೆ ಮಂಡಳಿಯ ಸದಸ್ಯರು ಭಕ್ತಿ ಭಾವದಿಂದ ವಿದಾಯ ಹೇಳಿದರು. ಪೊಲೀಸ್ ಇಲಾಖೆ ಯಾರೊಬ್ಬರಿಗೂ ಬಾವಿಯಲ್ಲಿ ಇಳಿದಂತೆ ಕಟ್ಟೆಚ್ಚರವಹಿಸಿ ಬಾವಿ ದಡದಲ್ಲಿಯೇ ನಿಂತು ಮೂರ್ತಿ ವಿಸರ್ಜನೆಗೆ ವ್ಯವಸ್ಥೆಗೆ ಮಾಡಿದ್ದು, ಇದೂ ಜನ ಮೆಚ್ಚುಗೆಗೆ ಪಾತ್ರವಾಗಿದೆ.

Tags:

error: Content is protected !!