Hukkeri

ಸರ್ವಜನಾಂಗದ ಕನ್ನಡ ತೋಟ ಯಮಕನಮರ್ಡಿ ಸಾಹಿತ್ಯ ಸಮ್ಮೇಳನ – ಚಂದ್ರಶೇಖರ ಸ್ವಾಮಿಜಿ.

Share

ಹುಕ್ಕೇರಿ ತಾಲೂಕಿನ ಯಮಕನಮರ್ಡಿ ನಗರದಲ್ಲಿ ಜರಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಜನಾಂಗದ ಕನ್ನಡ ತೋಟ ವಾಗಿದೆ ಎಂದು 12 ನೇ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.

ಹುಕ್ಕೇರಿ ತಾಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಸಾಹಿತ್ಯ ಸಮ್ಮೇಳನ ವನ್ನು ಸಮ್ಮೇಳನಾದ್ಯಕ್ಷರು ವಿವಿಧ ಪ್ರದರ್ಶನಗಳ ಮಳಿಗೆಗಳನ್ನು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಇದಕ್ಕೂ ಮೊದಲು ಸಮ್ಮೇಳನಾದ್ಯಕ್ಷರನ್ನು ರಥದಲ್ಲಿ ಮೇರವಣೆಗೆ ಮೂಲಕ ಮುಖ್ಯ ವೇದಿಕೆಗೆ ಬರಮಾಡಿಕೊಳ್ಳಲಾಯಿತು ಸಮ್ನೇಳನಾದ್ಯಕ್ಷ ಚಂದ್ರಶೇಖರ ಮಹಾಸ್ವಾಮಿಗಳು ಮಾದ್ಯಮಗಳೊಂದಿಗೆ ಮಾತನಾಡಿತ್ತಾ ಹುಕ್ಕೇರಿ ತಾಲೂಕಿನ ಅವರು ಯಮಕನಮರ್ಡಿ ಗ್ರಾಮದಲ್ಲಿ ಜರಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ದೂರಿಯಾಗಿ ಜರುಗಿ ಸರ್ವಜನಾಂಗದ ಕನ್ನಡ ತೋಟವಾಗಿ ಜಾತಿ ಮತ ಭೇಧ ವಿಲ್ಲದೆ ಎಲ್ಲಾ ಸಮೂದಾಯದವರು ಭಾಗವಹಿಸಿ ಯಶಸ್ವಿಗೋಳಿಸಿದ್ದಾರೆ,ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡ ಕಲಿತು ಸಹಬಾಳ್ವೆಯಿಂದ ಬಾಳಬೇಕು ಎಂದು ಸಲಹೆ ನೀಡಿದರು.
ಯುವ ಧುರಿಣ ಕಿರಣಸಿಂಗ ರಜಪೂತ ಮಾತನಾಡಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಮತ್ತು ಶಾಸಕ ನಿಖಿಲ್ ಕತ್ತಿಯವರ ಮಾರ್ಗದರ್ಶನದಲ್ಲಿ ಮತ್ತು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಹುಕ್ಕೇರಿ ಘಟಕದ ಸದಸ್ಯರ ಸಹಕಾರದಿಂದ ಯಮಕನಮರ್ಡಿ ನಗರದಲ್ಲಿ ಭಾವೈಕ್ಯತೆಯಿಂದ ಅಭೂತಪೂರ್ವ ಸಮ್ಮೇಳನ ಜರುಗಿದೆ ಎಂದರು .

ವೇದಿಕೆ ಮೇಲೆ ನಿಡಸೋಸಿ ಪಂಚಮ ಶಿವಲಿಂಗೆಶ್ವರ ಮಹಾಸ್ವಾಮಿಗಳು , ರಾಚೋಟಿ ಮಹಾಸ್ವಾಮಿಗಳು, ಗುರಸಿದ್ದ ಮಹಾಸ್ವಾಮಿಗಳು, ಆನಂದ ಮಹಾರಾಜ ಗೋಸಾವಿ, ಜಿಲ್ಲಾ ಅದ್ಯಕ್ಷೆ ಮಂಗಲಾ ಮೆಟಗುಡ್ಡ, ತಹಸಿಲ್ದಾರ ಮಂಜುಳಾ ನಾಯಿಕ, ಈರಣ್ಣಾ ಬೀಸಿರೋಟ್ಟಿ, ರವೀಂದ್ರ ಜಿಂಡ್ರಾಳಿ, ಎಲ್ ವಿ ಪಾಟೀಲ, ತಾಲೂಕಾ ಅದ್ಯಕ್ಷ ಪ್ರಕಾಶ ಅವಲಕ್ಕಿ, ಬಿ ಇ ಓ ಪ್ರಭಾವತಿ ಪಾಟೀಲ ಉಪಸ್ಥಿತರಿದ್ದರು.

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಪ್ರಕಾಶ ಅವಲಕ್ಕಿ ಮಾತನಾಡಿ ಯಮಕನಮರ್ಡಿ ನಗರದಲ್ಲಿ ಜರಗುತ್ತಿರುವ 12 ನೇ ಸಾಹಿತ್ಯ ಸಮ್ಮೇಳನ ಎಲ್ಲರ ಸಹಕಾರದಿಂದ ವಿಬೃಂಜನೆಯಿಂದ ಜರುಗುತ್ತಿದೆ ಹುಕ್ಕೇರಿ ತಾಲೂಕಿನ ಹಿರಿಯ ಸಾಹಿತಿ, ಕನ್ನಡ ಪರ ಹೋರಾಟ ಮತ್ತು ವಿಷೇಶ ಸಾಧನೆಮಾಡಿದ ಮಹನಿಯರಾದ ಡಾ, ಚಂದ್ರಶೇಖರ ಕಂಬಾರ , ಶಾಂತಾದೇವಿ ಕಣವಿ, ಪ್ರಕಾಶ ದೇಶಪಾಂಡೆ, ಮಹಾದೇವ ಟೋಪಣ್ಣವರ, ಎಂ ಅಕ್ಬರ್ ಅಲಿ, ಎಮ್ ಆರ್ ಸಾಖರೆ, ಡಾ, ಡಿ ವಿ ಪುರಾಣಿಕ, ಬಿ ಎಂ ಕಂಕಣವಾಡಿ ಇವರ ಹೆಸರಿನಲ್ಲಿ ಮಹಾದ್ವಾರಗಳನ್ನು ರ್ನಿಸಿ ಅವರಿಗೆ ಗೌರವ ಸಲ್ಲಿಸಲಾಗಿದೆ ಎಂದರು, ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಕನ್ನಡಾಭಿಮಾನಿಗಳು ಹೆಚ್ಚಿನವ. ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Tags:

error: Content is protected !!