Hukkeri

ಹುಕ್ಕೇರಿ – ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದ ಯಮಕನಮರ್ಡಿ ಗ್ರಾಮಸ್ಥರು

Share

ಹುಕ್ಕೇರಿ –  ಹುಕ್ಕೇರಿ ತಾಲೂಕಿನ ಯಮಕನಮರ್ಡಿ ನಗರದಲ್ಲಿ ಬಿ ಜೆ ಪಿ ಮುಖಂಡ ರವಿ ಹಂಜಿಯವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದರು.

ಪಾಕಿಸ್ತಾನ ಉಗ್ರರ ಅಡಗುದಾಣದ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂದೂರು ಕಾರ್ಯಾಚಾರಣೆ ನಡೆಸಿರುವ ಹಿನ್ನಲೆಯಲ್ಲಿ ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಗ್ರಾಮದ ಹಿಂದೂ ಪರ ಸಂಘಟನೆಗಳು , ದೇಶ ಭಕ್ತರು ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರು ಬುಧುವಾರ ರಾತ್ರಿ ಬೈಕ್ ರ್ಯಾಲಿ ನಡೆಸಿ ಭಾರತೀಯ ಸೇನೆ ಮತ್ತು ಪ್ರಧಾನಿ ಮೋದಿ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.

ನಂತರ ಮಾತನಾಡಿದ ಬಿ ಜೆ ಪಿ ಮುಖಂಡ ರವಿ ಹಂಜಿ ಪಾಕಿಸ್ತಾನ ಉಗ್ರರ ತಾಣದಲ್ಲಿ ಏರಸ್ಟ್ರೆಕ್ ಮಾಡುವ ಮೂಲಕ ಉಗ್ರರಿಗೆ ಭಾರತ ತಕ್ಕ ಉತ್ತರ ಕೊಟ್ಟಿದೆ. ಪಾಕಿಸ್ತಾನದ ಸೈನ್ಯ ಮತ್ತು ನಾಗರಿಕ ಪ್ರದೇಶಗಳಿಗೆ ಹಾನಿ ಮಾಡದೆ, ಪಹಲ್ಗಾಮ ದಲ್ಲಿ ದಾಳಿ ನಡೆಸಿ 26 ಭಾರತೀಯ ಅಮಾಯಕ ಹೆಣ್ಣು ಮಕ್ಕಳ ಕುಂಕುಮ ಅಳಿಸಿದ ಉಗ್ರರಿಗೆ ನಮ್ಮ ದೇಶ ಆಪರೇಷನ್‌ ಸಿಂದೂರ ಮೂಲಕ ಪ್ರತ್ಯುತ್ತರ ನೀಡಿ ಪ್ರತಕಾರ ತಿರಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ನಿಲುವು ಅವರ ನಾಯಕತ್ವಕ್ಕೆ ಕನ್ನಡಿಯಾಗಿದೆ,ಮೋದಿ ಮತ್ತು ಅವರ ಸೈನ್ಯಕ್ಕೆ ಅಭಿನಂದನೆ ಎಂದರು ಬೈಕ್ ರ್ಯಾಲಿಯಲ್ಲಿ ನೂರಾರು ಯುವಕರು, ಹಿಂದೂ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!