ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಎಸ್ ಡಿ ವಿ ಎಸ್ ಸಂಘದ ಅನ್ನಪೂರ್ಣೇಶ್ವರಿ ಇನ್ಸ್ಟಿಟ್ಯೂಟ್ ಆಪ್ ಮ್ಯಾನೆಜ್‌ಮೆಂಟ್ ಮಹಾವಿದ್ಯಾಲಯದಿಂದ ವಿವಿಧ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಸಲ್ಲಿಸಿದ ಮಹಿಳೆಯರಿಗೆ ಮಾನನಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
AIMR ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ ಸಮಾರಂಭವನ್ನು ಶ್ರೀಮತಿ ಮಿನಾಕ್ಷಿ ಪಾಟೀಲ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಶ್ರೀ ದುರದುಂಡೇಶ್ವರ ವಿದ್ಯಾವರ್ಧಕ ಸಂಘದ ನಿರ್ದೆಶಕ ಬಿ ಆರ್ ಪಾಟೀಲ , ಕಾರ್ಯದರ್ಶಿ ಜಿ ಎಸ್ ತೋಟಗಿ, ಆಡಳಿತಾಧಿಕಾರಿ ಡಾ, ಬಿ ಎ ಪೂಜಾರಿ, ಮಾನನಿ ಕಾರ್ಯಕ್ರಮದ ರೂವಾರಿ ಸಂತೋಷ ತೇರಣಿಮಠ ಉಪಸ್ಥಿತರಿದ್ದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಸಲ್ಲಿಸುತ್ತಿರುವ ಸುಮಾರು ಹನ್ನೊಂದು ಜನ ಮಹಿಳೆಯರನ್ನು ಸತ್ಕರಿಸಿ ಅಭಿನಂದಿಸಲಾಯಿತು.
ಮಾದ್ಯಮಗಳೊಂದಿಗೆ ಮಾತನಾಡಿದ ಎ ಆಯ್ ಎಮ್ ಆರ ನಿರ್ದೆಶಕಿ ಶ್ರೀಮತಿ ವಿದ್ಯಾ ಸ್ವಾಮಿ ಸಂಕೇಶ್ವರ ನಗರದಲ್ಲಿ ಇಂದು ಜರುಗಿದ ಮಾನನಿ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಸುಮಾರು ಮೂರು ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿನಿಗಳು ಭಾಗವಹಿಸಿ ಮಹಿಳಾ ಸಬಲಿಕರಣ ಕುರಿತು ಮಾಹಿತಿ ಹಾಗೂ ಪ್ರೇರಣೆ ಪಡೆದರು ಈ ರೀತಿ ಕಾರ್ಯಕ್ರಮವನ್ನು ನಮ್ಮ AIMR ಮಹಾವಿದ್ಯಾಲಯವು ಪ್ರತಿ ವರ್ಷ ಆಯೋಜನೆ ಮಾಡಿ ಮಹಿಳೆಯರಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತಿದೆ ಎಂದರು ( )
ಈ ಸಂದರ್ಭದಲ್ಲಿ ಮಾನಿನಿ ಮುಖ್ಯ ಸಂಯೋಜಕ ಸಂತೋಷ ತೇರಣಿಮಠ, ಕಾರ್ಯಕ್ರಮ ಆಯೋಜಕಿ ಸರೋಜಾ ಸೂರ್ಯವಂಶಿ ಮತ್ತು AIMR ಪ್ರಾದ್ಯಾಪಕರಾದ ಡಾ, ಪ್ರಕಾಶ ಕುಂದರಗಿ, ಕಾವೇರಿ ಖಡಕಭಾವಿ, ಮಯೂರ ಜಾಧವ, ಆರತಿ ಕಾಳೆ, ಬಿ ಎಸ್ ಜಿವಿತಾ,ಪ್ರಶಾಂತ ಮಗದುಮ್ಮ ಉಪಸ್ಥಿತರಿದ್ದರು.