ಬಸವನಾಡು ಹಾಗೂ “ಸೈಕ್ಲಿಂಗ್ ಕಾಶಿ” ಎಂದು ಖ್ಯಾತಿ ಹೊಂದಿರುವ ವಿಜಯಪುರ ನಗರದಲ್ಲಿ ಹೊಸ ವರ್ಷದ ಆರಂಭದಲ್ಲಿ ಮೂರನೇ ಬಾರಿಗೆ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನ್ನು ಆಯೋಜಿಸಲಾಗುತ್ತಿದೆ.

2024ನೇ ಜನೇವರಿ 09 ರಿಂದ 12 ರವರೆಗೆ ನಗರದಲ್ಲಿ ಭಾರತೀಯ ಸೈಕ್ಲಿಂಗ್ ಫೆಡರೇಶನ್ ನವದೆಹಲಿ ಇವರ ಮಾನ್ಯತೆಯೊಂದಿಗೆ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನ್ನು ಕರ್ನಾಟಕ ಅಮೆಚ್ಯುರ್ ಸೈಕ್ಲಿಂಗ್ ಅಸೋಶಿಯೇಶನ್ ಹಾಗು ವಿಜಯಪುರ ಅಮೆಚ್ಯುರ್ ಸೈಕ್ಲಿಂಗ್ ಅಸೋಶಿಯೇಶನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ ತಿಳಿಸಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರದ ಹೊರವಲಯದ ವಿಜಯಪುರ – ಸೋಲ್ಲಾಪುರ ರಾಷ್ಟ್ರೀಯ ರೋಡ (ಎನ್.ಎಹ್-13)ರಲ್ಲಿ ನಡೆಸಬೇಕೆಂದು ಉದ್ದೇಶಿಸಿದ್ದು, ಸುಮಾರು 750 ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಮತ್ತು 250 ಕ್ಕಿಂತ ಹೆಚ್ಚು ಕ್ರೀಡಾಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಇದರಲ್ಲಿ 14 ವರ್ಷದಳಗಿನ, 16 ವರ್ಷ ವರ್ಷದಳಗಿನ, 18 ವರ್ಷ ವರ್ಷದಳಗಿನ, 23 ವರ್ಷ ವರ್ಷದಳಗಿನ, ಬಾಲಕ/ಬಾಲಕಿಯರ ಮತ್ತು ಪುರಷರ ಮತ್ತು ಮಹಿಳೆಯರ ವಯೋಮಾನದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಚಾಂಪಿಯನ್ ಶಿಪ್ ಸಂಘಟನೆಗೆ 45 ಲಕ್ಷ ರೂ. ಖರ್ಚಾಗಬಹುದು ಆದ್ದರಿಂದ ಯಶಸ್ಸಿಗೆ ಜಿಲ್ಲೆಯ ಸಂಃ ಸಂಸ್ಥೆಗಳು ಹಾಗೂ ದಾನಿಗಳ ಆರ್ಥಿಕ ನೆರವು ನೀರಿಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
