Vijaypura

ಮಾತನಾಡುವ ದೇವರು ಯಲಗೂರ ಆಂಜನೇಯ ಕಾರ್ತಿಕೋತ್ಸವ: ಹರಿದು ಬಂತು ಭಕ್ತ ಸಾಗರ

Share

ಶ್ರೀರಾಮನ ಪರಮ ಭಕ್ತ, ರಾಮನ ಬಂಟ, ವಾಯುಪುತ್ರ, ಆಂಜನಿಸುತ ಹೀಗೆ ನೂರಾ ಎಂಟು ಹೆಸರಿನ ಒಡೆಯನಾಗಿರುವ ಆಂಜನೇಯನು ಸದಾ ಪೂಜ್ಯನೀಯ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಯುಲಗೂರದಲ್ಲಿ ನೆಲೆಸಿರುವ ಭಕ್ತರ ಆರಾಧ್ಯದೈವ ಏಳೂರು ಒಡೆಯ ಹಾಗೂ ಮಾತನಾಡುವ ದೇವರ ಸುಕ್ಷೇತ್ರ ಯಲಗೂರದ ಯಲಗೂರೇಶ್ವರ ಕಾರ್ತಿಕೋತ್ಸವ ಶನಿವಾರದಿಂದ ವಿಜ್ರಂಭಣೆಯಿಂದ ಆರಂಭಗೊಂಡಿದೆ. ಮೂರು ದಿನಗಳ ನಡೆಯುವ ಈ ಜಾತ್ರೋತ್ಸವದಲ್ಲಿ ವಿವಿಧ ಪೂಜೆ, ಪುನಸ್ಕಾರ ಹಾಗೂ ಕಾರ್ಯಕ್ರಮ ನಡೆಯಲಿದೆ. ಮೊದಲು ದಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕದಿಂದ ಆರಂಭಗೊಂಡ ಆಂಜನೇಯನ ವಿಶೇಷ ಜಾತ್ರೆಗೆ ಬೆಳಗಾವಿ, ವಿಜಯಪುರ, ಗುಲಬುರ್ಗಾ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ನಾನಾ ಭಾಗದಿಂದ ಭಕ್ತರ ದಂಡೆ ಹರಿದು ಬಂದಿತ್ತು. ಕೊವಿಡ್ ಲೆಕ್ಕಿಸದೇ ದೇವರ ದರ್ಶನಕ್ಕೆ ಭಕ್ತರು ಮುಗಿ ಬಿದ್ದಿದ್ದರು. ಅಭಿಷೇಕ ನಂತರ ಪವಮಾನ‌ ಹೋಮ, ಮಹಾಪೂಜೆ ನೆರವೇರಿತು. ನಾನಾ ಭಜನಾ ಮಂಡಳಿಯಿಂದ ಸಾಮೂಹಿಕ ಭಜನೆ, ರಾತ್ರಿ ವಿಜ್ರಂಭಣೆಯಿಂದ ಕಾರ್ತಿಕೋತ್ಸವ ನಡೆಯಿತು. ಅದರ ಜತೆಗೆ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಸಹ ನೆರವೇರಲಿದೆ. ಉಳಿದ ಎರಡು ದಿನಗಳು ಸಹ ವಿವಿಧ ಕಾರ್ಯಕ್ರಮ ನಡೆಯಲಿವೆ. ಅಲ್ಲದೇ ಇದೇ ಜಾತ್ರಾ ಮಹೋತ್ಸವದ ಅಂಗವಾಗಿ ಬಂಡಿ ಸ್ಪರ್ಧೆ ಸಹ ನೇರವೇರಿತು. ಇನ್ನೂ ತಮ್ಮ ಆರಾಧ್ಯ ದೈವ ಯಲಗೂರೇಶನ ದರ್ಶನ ಪಡೆಯಲು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

Tags:

error: Content is protected !!