State

ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ: ಮೂಡಲಗಿಯಲ್ಲಿ ಮೊಳಗಿದ ಕನ್ನಡ ಕಹಳೆ

Share

: ಕನ್ನಡದ ಕೆಲಸ ಅಭಿಮಾನದಿಂದ ಆಗಬೇಕು ಪ್ರತಿನಿತ್ಯವೂ ಕನ್ನಡದ ಜಾಗೃತಿ ಮೂಡಿಸುವಲ್ಲಿ ಕನ್ನಡಪರ ಕಾರ್ಯಕ್ರಮಗಳು ಜರುಗಬೇಕು ಶಾಲಾ ಕಾಲೇಜುಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ನಮ್ಮ ಕನ್ನಡ ನಾಡು ನುಡಿ ನೆಲದ ಕುರಿತಂತೆ ಜಾಗೃತಿ ಮೂಡಿಸುವಂತ ಕೆಲಸದ ಅವಶ್ಯಕತೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಗಳಾ ಮೆಟಗುಡ್ಡ ಅವರು ತಿಳಿಸಿದರು.

ಮೂಡಲಗಿ ಪಟ್ಟಣದ ಕುರಹಿನಹಟ್ಟಿ ಅರ್ಬನ ಕೋ ಅಪ್ ಸೊಸೈಟಿ ಸಬಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೂಡಲಗಿ ತಾಲೂಕಾ ಘಟಕದ ನೂತನ ಪಧಾಧಿಕಾರಿಗಳ ಅಧಿಕಾರ ಪದಗ್ರಹಣ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಚಾಲನೆ ನೀಡಿದರು. ಮೊದಲಿಗೆ ಮೂಡಲಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡ ಭುವನೇಶ್ವರಿಯ ಭಾವಚಿತ್ರದ ಭವ್ಯವಾದ ಮೆರವಣಿಗೆಯನ್ನು ಸಕಲ ಕಲಾ ತಂಡಗಳೊಂಡಿಗೆ ಕರಡಿ ಮಜಲು, ಸನಾದಿಯೊಂದಿಗೆ ನಡಿತು. ಮೆರವಣಿಗೆಯಲ್ಲಿ ನೂರಾರು ಕನ್ನಡಾಭಿಮಾನಿಗಳು ಪಾಲ್ಗೊಂಡು ಪೂಜ್ಯ ಕಲ್ಮೇಶ್ವರ ಭೊಧ, ಶ್ರೀ ಅಶ್ವಾರೂಢ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕನ್ನಡ ಸಾಹಿತ್ಯ ಪರಿಷತ ಮೂಡಲಗಿ ತಾಲೂಕಾ ಅಧ್ಯಕ್ಷರಾಗಿ ಡಾ.ಸಂಜಯ ಸಿಂದಿಹಟ್ಟಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಲಶೇಖರ ಬಂದಿ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಮೋಹನ ಪಾಟೀಲ, ಡಾ.ಮಹಾದೇವ ಜಿಡ್ಡಿಮನಿ, ಕಾರ್ಮಿಕ ಇಲಾಖೆಯ ಜಂಟಿ ನಿರ್ದೇಶಕ ವೆಂಕಟೇಶ ಸಿಂದಿಹಟ್ಟಿ, ಆಕಾಶ್ ಥಬಾಜ, ಬಸವಣ್ಣಿ ಮುಗಳಖೋಡ, ಅಜಿತ ಮನ್ನಿಕೇರಿ, ಸುಭಾಸ ಕಮದಾಳ, ಶಿವಲಿಂಗ ಆರಗಿ, ಮಹಾವೀರ ಸಲ್ಲಾಗೋಳ, ಚಿದಾನಂದ ಹೂಗಾರ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!