ಸೈಲೆನ್ಸ್ರ್ ಕಟ್ ಆದರೂ ಕೂಡ ಡ್ರೈವರ್ ಟ್ರಕ್ ಚಲಾಯಿಸಿದ ಕಾರಣಕ್ಕೆ ಟ್ರಕ್ ಸುಟ್ಟು ಕರಕಲಾದ ಘಟನೆ ಖಾನಾಪುರ-ಬೀಡಿ ರಸ್ತೆಯಲ್ಲಿ ನಡೆಸಿದೆ.

ಖಾನಾಪೂರ ಕಡೆಯಿಂದ ಬೀಡಿ ಕಡೆಗೆ ಹೋಗುತ್ತಿದ್ದ ಟ್ರಕ್ ನೋಡು, ನೋಡುತ್ತಿದ್ದಂತೆ ಬೆಂಕಿ ಗೆ ಆಹುತಿಯಾಗಿದೆ. ಟ್ರಕ್‍ನ ಸೈಲೈಸರ್ ಕಟ್ ಆಗಿತ್ತು. ಇದನ್ನು ಬೀಡಿ ವರೆಗೆ ಹೋಗಿ ಸರಿ ಮಾಡಿಸಿಕೊಳ್ಳುವ ಉದ್ದೇಶದಿಂದ ಡ್ರೈವರ್ ಟ್ರಕ್ ಚಲಾಯಿಸಿಕೊಂಡು ಹೋಗುತ್ತಿದ್ದ.

ಆದರೆ ನೋಡಿ ನೋಡುತ್ತಿದ್ದಂತೆಯೇ ಟ್ರಕ್‍ಗೆ ಬೆಂಕಿ ಆವರಿಸಿತು. ಟ್ರಕ್ ಮುಂದಿನ ಭಾಗ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮಾಹಿತಿ ದೊರೆಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ನಂದಗಡ ಪೆÇಲೀಸರು ದೌಡಾಯಿಸಿದ್ದಾರೆ. ಟ್ರಕ್ ಮಾಲಿಕ ಯಾರು ಏನು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತಂತೆ ವಿಚಾರಣೆ ನಡೆಸಲಾಗುತ್ತಿದೆ.