ಸಮಾಜ ಹಾಗೂ ಧರ್ಮ ಒಡೆಯುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಪ್ರೊಫೆಸರ್‌ಗಳು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೈ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಹಿಜಾಬ್ ವರ್ಸಸ್ ಕೇಸರಿ ವಿಚಾರಕ್ಕೆ ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯ ಆರೋಪ-ಪ್ರತ್ಯಾರೋಪ ಕೇಳಿ ಬರುತ್ತಿದೆ. ಅಲ್ಲದೇ ಈ ವಿಚಾರ ಇಡೀ ವಿಶ್ವದಾಧ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಹಿಜಾಬ್ ವಿಚಾರದಲ್ಲಿ ಸ್ಪಷ್ಟವಾದ ಆದೇಶ ಜಾರಿ ಮಾಡಿದೆ. ಏಕರೂಪ ಸಮವಸ್ತ್ರ ನೀತಿ ಜಾರಿ ಮಾಡಿದೆ. ಈ ಬಗ್ಗೆ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಮವಸ್ತ್ರ ಕಡ್ಡಾಯ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕು. ಪೆÇಲೀಸ್ ಇಲಾಖೆಯಲ್ಲಿನ ಮುಸ್ಲಿಂರು ಪೆÇಲೀಸ್ ಕ್ಯಾಪ್ ಹಾಕಲ್ಲ. ಟೋಪಿ ಹಾಕ್ತಿನಿ ಅಂದರೆ ನಡೆಯುತ್ತಾ..? ಇದು ಅದೇ ರೀತಿ. ಸರಕಾರದ ಆದೇಶದಂತೆ ಸಮವಸ್ತ್ರ ಧರಿಸಬೇಕು ಎಂದರು.
ಇನ್ನು ಸಮಾಜ, ಧರ್ಮ ಒಡೆಯುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಪ್ರೊಫೆಸರ್‌ಗಳು. ಅವರಿಂದ ನಮಗೆ ಪಾಠ ಬೇಡ. ರಾಹುಲ್ ಗಾಂಧಿ ಈ ವಿಚಾರದಲ್ಲಿ ಟ್ವೀಟ್ ಮಾಡುವಾಗ ಸಿನಿಮಾ ತಾರೆಯರು ಸಲಹೆ ಪಡೆಯದೆ ಅವರ ತಾಯಿಯ ಸಲಹೆ ಪಡೆದು ಟ್ವೀಟ್ ಮಾಡಲಿ ಎಂದರು. ರಾಹುಲ್ ಗಾಂಧಿಗೆ ತಾಯಿ ಶಾರದೆ, ಏಸು ಒಳ್ಳೆಯ ಬುದ್ಧಿ ಕೊಡಲಿ ಎಂದು ಇದೇ ವೇಳೆ ಬಿ.ಸಿ.ನಾಗೇಶ್ ಟಾಂಗ್ ಕೊಟ್ಟರು.
ಇನ್ನು ಸಿದ್ದರಾಮಯ್ಯಗೆ ಈ ವಿಚಾರದ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಇಲ್ಲ. ಶಾದಿ ಭಾಗ್ಯ, ಒಂದೇ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ಕಲ್ಪಿಸಿ ಸಮಾಜ ಒಡೆದದ್ದು ಯಾರು ಎಂಬುದು ಜನರಿಗೆ ಗೊತ್ತಿದೆ. ಶಾಲೆಯಲ್ಲಿ ಶಾರದಾ ಪೂಜೆ, ಗಣಪತಿ ಪೂಜೆ ಇವೆಲ್ಲಾ ಬಿಜೆಪಿ ಸರ್ಕಾರ ಬಂದ ಮೇಲೆ ಬಂದಿಲ್ಲ. ಇದು ಈ ನೆಲದ ಸಂಸ್ಕøತಿ, ಈ ಬಗ್ಗೆ ಪ್ರಶ್ನೆ ಮಾಡಬೇಡಿ ಎಂದು ಬಿ.ಸಿ.ನಾಗೇಶ್ ಕಿಡಿಕಾರಿದರು.
ಒಟ್ಟಿನಲ್ಲಿ ಶಾಲಾ, ಕಾಲೇಜುಗಳಲ್ಲಿ ಆಯಾ ಸಮವಸ್ತ್ರಗಳನ್ನೇ ಧರಿಸಿಕೊಂಡು ಬರಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸುತ್ತಲೇ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದು ಈ ವೇಳೆ ಕಂಡು ಬಂತು.