ಹಿಜಾಬ್ ಕೇಸರಿ ವಿವಾದದ ಬಗ್ಗೆ ಇಂದು ಹೈಕೋರ್ಟಗೆ ನಮ್ಮ ಕ್ರಮಗಳ ಬಗ್ಗೆ ಅಡ್ವೋಕೇಟ್ ಜನರಲ್ ತಿಳಿಸಿದ್ದಾರೆ. ಹಿಜಾಬ್ ಪ್ರಕರಣದ ಹಿಂದೆ ಬೇರೆ ಶಕ್ತಿಗಳು ಕೆಲಸ ಮಾಡುತ್ತಿದೆ. ಪೆÇಲೀಸ್ ಇಲಾಖೆ ಮೂಲಕ ತನಿಖೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಕಾಲೇಜು ನಿಯಮ ಪಾಲನೆ ಮಾಡಿದ್ರೆ ಮಾತ್ರ ಕಾಲೇಜಿಗೆ ಎಂಟ್ರಿ ಇಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಎಂಟ್ರಿ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕೋರ್ಟಗೆ ಎಲ್ಲರೂ ಒಂದೇ ಎಂಬ ಮನಸ್ಥಿತಿ, ಶಿಕ್ಷಣ ಇಲಾಖೆಯ ಸಮಾನತೆಯ ರೂಲ್ಸ್ ಎಲ್ಲವನ್ನೂ ನಾವು ಸ್ಪಷ್ಟಪಡಿಸುತ್ತೇವೆ. ಈ ನಿಯಮಗಳನ್ನು ಎಲ್ಲರೂ ಪಾಲನೆ ಮಾಡಿದರೆ ಮಾತ್ರ ವಿದ್ಯಾರ್ಥಿಗಳು ಕಾಲೇಜಿಗೆ ಬರಲಿ ಇಲ್ಲದೆ ಹೋದ್ರೆ ಕಾಲೇಜಿಗೆ ಎಂಟ್ರಿ ಇಲ್ಲ. ಕೋರ್ಟಗೆ ಇವತ್ತು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದರು.
ಇನ್ನು 14 ಲಕ್ಷ ಮಕ್ಕಳ ಪೈಕಿ 29 ಮಕ್ಕಳಿಂದ ವ್ಯವಸ್ಥೆ ಹಾಳಾಗಲು ನಾವು ಬಿಡುವುದಿಲ್ಲ. ಸರ್ಕಾರ ವ್ಯವಸ್ಥೆ ಹಾಳು ಮಾಡೋದಕ್ಕೆ ಅವಕಾಶ ಕೊಡುವುದಿಲ್ಲ. ಈ ವಿವಾದದ ಹಿಂದೆ ಕೆಲ ಸಂಘಟನೆಗಳು ಕೆಲಸ ಮಾಡುತ್ತೀವೆ. ಈ ಬಗ್ಗೆ ಪೆÇಲೀಸ್ ತನಿಖೆ ಮಾಡಿಸ್ತೀವಿ. ಸಂವಿಧಾನದ ಬಗ್ಗೆ ಮಾತಾಡೋರು ಮೊದಲು ಸಂವಿಧಾನ ಓದಲಿ. ಸರ್ಕಾರದ ನಿಯಮಗಳನ್ನು ವಿದ್ಯಾರ್ಥಿಗಳು ಪಾಲನೆ ಮಾಡಲೇಬೇಕು ಎಂದು ಶಿಕ್ಷಣ ಸಚಿವರು ಕಿವಿಮಾತು ಹೇಳಿದರು.
ಸಮಾನತೆಯನ್ನು ಶಾಲೆಗಳಲ್ಲಿ ಬರುವಂತೆ ಮಾಡುವಲ್ಲಿ ಸಮವಸ್ತ್ರ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಹಾಗಾಗಿ ಸರ್ಕಾರ ಈ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುತ್ತದೆ. ಇದೀಗ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ಧರ್ಮದ ಕೇಂದ್ರವಾಗುವುದನ್ನು ಮತ್ತು ಅಲ್ಲಿ ನಡೆಯುವ ಅಶಾಂತಿಯನ್ನು ತಪ್ಪಿಸಲು ಸರ್ಕಾರ ಸಿದ್ಧವಿದೆ ಎಂದು ಇದೇ ವೇಳೆ ಸಚಿವ ಬಿ.ಸಿ.ನಾಗೇಶ್ ಎಚ್ಚರಿಕೆ ನೀಡಿದರು.