ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಡಿ ವೆಂಕಟ್ ಕೊನಂಕಿ ನಿರ್ಮಾಣ ಮಾಡಿರುವ ಬೈ ಟು ಲವ್ ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರದ ನಿರ್ದೇಶಕ ಹರಿ ಸಂತೋಷ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,, ಚಿತ್ರದ ಪ್ರೇಮ ಕಹಾನಿಗೆ ಸಿನಿ ಪ್ರೀಯರು ಮೆಚ್ಚಿದ್ದಾರೆ ಎಂದರು.
ಚಿತ್ರದಲ್ಲಿ ಒಟ್ಟು ೪ ಹಾಡುಗಳನ್ನು ಒಳಗೊಂಡಿದ್ದು, ಎಲ್ಲಾ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು,, ಎಲ್ಲರ ಧ್ವನಿಯಲ್ಲಿ ಕೇಳಿ ಬರುತ್ತಿದೆ ಎಂದರು.
ಚಿತ್ರದ ನಾಯಕ ನಟ ಧನ್ವೀರ್ ಮಾತನಾಡಿ, ಈ ಚಿತ್ರದಲ್ಲಿ ನಾನು ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಶ್ರೀಲೀಲಾ ಅವರು ಮಲೆನಾಡು ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನಗೊಳ್ಳುತ್ತಿದೆ ಎಂದರು.
ಮಾಸ್ ಚಿತ್ರದಿಂದ ಲವರ್ ಬಾಯ್ ಆಗಿ ಅಭಿನಯಿಸಿದ್ದು, ಚಾಲೆಂಗ್ ಆಗಿ ಅನಿಸಿತು ಎಂದರು.
ಛಾಯಾಗ್ರಹಣ ಮಹೇನ್ ಸಿಂಹ, ಸಂಗೀತ ಲೋಕನಾಥ್ ಹಾಗೂ ಯೋಗಾನಂದ್ ಅವರಿಂದ ಚಿತ್ರಕ್ಕೆ ಸಂಭಾಷಣೆ ಮೂಡಿ ಬಂದಿದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕಿ ಶ್ರೀಲೀಲಾ ಉಪಸ್ಥಿತರಿದ್ದರು.
