ಬೆಳಗಾವಿಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿನಿಯರಿಗಾಗಿ ಆತ್ಮ ವಿಶ್ವಾಸ ತುಂಬುವ ಹಾಗೂ ಆತ್ಮ ರಕ್ಷಣೆ ತುಂಬುವ ಉದ್ದೇಶದಿಂದ ಕರಾಟೆ ಕೌಶಲ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭವನ್ನು ಹಮ್ಮಿಕೊಳ್ಳಳಾಗಿತ್ತು.

ಬೆಳಗಾವಿಯ ನೆಹರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ, ಸಮಾಜಕಲ್ಯಾಣ ಇಲಾಖೆ, ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ವಸತಿನಿಲಯಗಳ ವಿದ್ಯಾರ್ಥಿನಿಯರು ಕರಾಟೆ ಕೌಶಲವನ್ನು ಪ್ರದರ್ಶಿಸಿದರು.

ಈ ವೇಳೆ ಕಾರ್ಯಕ್ರಮವನ್ನು ನಉದ್ದೇಶಿಸಿ ಮಾತನಾಡಿದ ಬೆಳಗಾವಿಯ ಉತ್ತರ ಶಾಸಕ ಅನೀಲ್ ಬೆನಕೆ, ಓಬವ್ವ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ ಈ ಹಿಂದೆಯೇ ಬಹಳ ವರ್ಷಗಳ ಹಿಂದೆಯೇ ನಡೆಯಬೇಕಿತ್ತು. ಏಕಂದರೆ ಸಮಾಜದಲ್ಲಿ ಮಹಿಳೆ ಸಬಲರಾಗಬೇಕಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಸಬಲರಾಗಬೇಕಾದರೆ ಈ ರೀತಿಯ ತರಬೇತಿ ಪಡೆದುಕೊಳ್ಳುವುದು ಅವಶ್ಯವಿದೆ ಎಂದರು.
ಇನ್ನು ಈ ಕುರಿತಂತೆ ಮಾತನಾಡಿದ ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ, ಬೆಳಗಾವಿ ನಗರದಲ್ಲಿ ವಸತಿನಿಲಯಗಳ ಹೆಣ್ಣುಮಕ್ಕಳಿಗೆ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಇನ್ನುಳಿದ ಎಲ್ಲಾ ಹೆಣ್ಣುಮಕ್ಕಳಿಗೂ ಈ ತರಬೇತಿ ಕಾರ್ಯಕ್ರಮ ನಡೆಯಬೇಕಿದೆ. ಇತ್ತೀಚೆಗೆ ಭಾರತ ಸರಕಾರ ಫೈಟರ್ ಪೈಲಟ್‍ಗಳಾಗಿ ಹೆಣ್ಣು ಮಕ್ಕಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಹೆಣ್ಣು ಮಕ್ಕಳನ್ನೂ ಕೂಡ ಸೇರಿಸಿಕೊಳ್ಳಲಾಗುತ್ತಿದೆ. ಇಂದು ನೀಡುತ್ತಿರುವ ಒಬವ್ವ ಕರಾಟೆ ಕಲೆಯ ತರಬೇತಿಯನ್ನು ನೀವೆಲ್ಲ ಕಲಿಯಬೇಕು. ಈ ಮೂಲಕ ರಾಷ್ಟ್ರ ರಕ್ಷಣೆಗೆ ನೀವೆಲ್ಲ ಮುಂದಾಗಬೇಕೆಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ಕರಾಟೆ ತರಬೇತಿ ಮೂಲಕ ಸರಕಾರ ಮಕ್ಕಳಲ್ಲಿ ಸ್ವಯಂ ರಕ್ಷಣೆ ತರಬೇತಿ ಹಾಗೂ ಸಬಲರಾಗುವ ನಿಟ್ಟಿನಲ್ಲಿ ನೀಡುತ್ತಿರುವ ಈ ತರಬೇತಿ ಎಲ್ಲ ಹೆಣ್ಣುಮಕ್ಕಳಿಗೂ ದೊರಕಬೇಕು. ಈ ಮೂಲಕ ಸಶಕ್ತ ಸಮಾಜ ನರ್ಮಾಣಕ್ಕೆ ನಾಂದಿ ಹಾಡಬೇಕೆಂಬುದು ಎಲ್ಲರ ಆಶಯ.