Belagavi

ಬೆಳಗಾವಿ ನಗರದಲ್ಲಿ ಮುಸ್ಲಿಂ ವೇಶ ಧರಿಸಿ ತಿರುಗುತ್ತಿದ್ದ ಅನ್ಯ ಕೋಮಿನ ಐವರನ್ನು ವಶಕ್ಕೆ ಪಡೆದ ಪೊಲೀಸ್

Share

ಬೆಳಗಾವಿ ನಗರದಲ್ಲಿ ಅನ್ಯ ಕೋಮಿನ 5ಜನ ಸಂಶಯಾತ್ಮಕವಾಗಿ ಮನೆ ಮನೆಯ ಬಾಗಿಲನ್ನು ನೋಡುತ್ತ ತಿರುಗಾಡುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಅವರನ್ನು ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ.

ಇಂದು ಮಧ್ಯಾಹ್ನ ಬೆಳಗಾವಿ ನಗರದ ವೀರಭದ್ರ ನಗರ ಜೀರೋ ಕ್ರಾಸ್‍ನಲ್ಲಿ ಆಂಧ್ರ ಮೂಲದ 5ಜನ ಯುವಕರು ಮುಸ್ಲಿಂ ಸಮುದಾಯದ ವೇಷಭೂಷಣಗಳನ್ನು ಹಾಕಿಕೊಂಡು ಭಿಕ್ಷೆ ಬೇಡುತ್ತಾ ಮನೆ ಮನೆಗೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನರು ಅವರನ್ನು ವಿಚಾರಿಸಿದ್ದಾರೆ.

ಇದರಿಂದ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಅವರನ್ನು ವಿಚಾರಿಸಿದಾಗ ಅವರು, ನಾವು ಆಂಧ್ರ ಮೂಲದವರು. ಹೊಟ್ಟೆಪಾಡಿಗಾಗಿ ಈ ವೇಷ ಹಾಕಿಕೊಂಡು ತಿರುಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಸ್ಥಳಕ್ಕೆ ಮಾರ್ಕೆಟ್ ಪಿಎಸ್‍ಐ ವಿಠ್ಠಲ ಹಾವನೂರು ಭೇಟಿ ನೀಡಿ ಎಲ್ಲಾ ಯುವಕರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದಾರೆ.

Tags:

error: Content is protected !!