ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳನ್ನು ಡಿಜಿಟಲ್ ವೇದಿಕೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸಂಜೀವಿನಿ- ಕೆಎಸ್‍ಆರ್‍ಎಲ್‍ಪಿಎಸ್ ಹಾಗೂ ಅಮೆಜಾನ್ ಕಂಪನಿ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.

ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳನ್ನು ಡಿಜಿಟಲ್ ವೇದಿಕೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಜೀವಿನಿ- ಕೆಎಸ್‍ಆರ್‍ಎಲ್‍ಪಿಎಸ್ ಹಾಗೂ ಅಮೆಜಾನ್ ಕಂಪನಿಗಳು ಸಿಎಂ ಬಸವರಾಜ ಬೊಮ್ಮಾಯಿವರ ಮಧ್ಯಸ್ಥಿಕೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಇಂದು ವ್ಯಾಪಾರ ವಹಿವಾಟು ಉದ್ದೇಶದಿಂದ ಕೆಎಸ್‍ಆರ್‍ಎಲ್‍ಪಿಎಸ್ ಹಾಗೂ ಅಮೆಜಾನ್ ಕಂಪನಿ ನಡುವೆ ಒಪ್ಪಂದಕ್ಕೆ ಸಹಿ ಹಕಿವೆ. ಇದು ಸಂತೋಷಕರ ವಿಷಯ. ಇದು ಉತ್ಪಾದನೆಯನ್ನು ಕೆಳಮಟ್ಟದಿಂದ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಾಯಕವಾಗುತ್ತದೆ. ಇನ್ನು ದೇಶದಲ್ಲಿ ಶೇ30ರಷ್ಟು ಜನರು ಮಾತ್ರ ತಲಾ ಆದಾಯದ ದುಡಿಮೆಯಲ್ಲಿ ತೊಡಗಿದ್ದಾರೆ.
ಇನ್ನುಳಿದ ಶೇ70ರಷ್ಟು ಜನತೆ ಇದರ ವ್ಯಾಪ್ತಿಗೆ ಸಿಗುವುದಿಲ್ಲ. ಅವರು ಜೀವನೋಪಾಯಕ್ಕಾಗಿ ಮಾತ್ರ ದುಡಿಯುತ್ತಾರೆ. ಕೃಷಿ ಹಾಗೂ ಋತು ಮಾನಿಕ ಕಾರ್ಯಗಳನ್ನು ಅವಲಂಬಿಸಿದ್ದಾರೆ. ಈಗ ನಾವು ರಾಜ್ಯದಲ್ಲಿ ನಿಗದಿತ ಗುರಿಯನ್ನು ಹೊಂದಿದ್ದೇವೆ. ಈ ಶೇ 70ರಷ್ಟು ಜನರಲ್ಲಿ ಶೇ50ರಷ್ಟು ಜನರನ್ನು ನಾವು ಮೆಲ್ದರ್ಜೆಗೆ ಏರಿಸಬೇಕಿದೆ. ಇವರ ತಲಾ ಆದಾಯದಲ್ಲಿ ಹೆಚ್ಚಳ ಮಾಡಿ ಜಿಡಿಪಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ವರನ್ನು ಪ್ರೋತ್ಸಾಹಿಸಬೇಕಿದೆ. ಈ ಕಾಯ ಬಹಳಷ್ಟು ಕಠಿಣವಾಗಿದ್ದು ನಾವು ಕಾರ್ಯ ಮಾಡಲೇಬೇಕಿದೆ. ಇನ್ನು ರಾಜ್ಯದಲ್ಲಿ ಬಡತನವನ್ನು ಗೆಲ್ಲಬೇಕಾದರೆ ನಾವು ಬಡತನವನ್ನು ಸೋಲಿಸಲೇಬೇಕಾಗಿದೆ ಎಂದರು.
ಇನ್ನು ಸರಕಾರದ ಈ ಪ್ರಯತ್ನ ಜನರನ್ನು ಬಡತನದಿಂದ ಮೇಲೆತ್ತುವುದಲ್ಲ. ಬದಲಾಗಿ ಯಾರು ಬಡತನದಿಂದ ಹೊರಬರಬೇಕೆಂದು ಬಯಸುತ್ತಾರೋ ಅವರ ಬೆನ್ನಿಗೆ ನಿಲ್ಲಬೇಕು. ಪ್ರಸ್ತುತ ದೇಶದ ಅತೀದೊಡ್ಡ ಶತ್ರು ಎಂದರೆ ಬಡತನ. ನಾವು ಇದರ ವಿರುದ್ಧ ಹೋಡಿ ಜಯಿಸಲೇಬೇಕಾಗಿದೆ. ಆರ್ಥಿಕ ಚಟುವಟಿಕೆಗಳು ವಿಸ್ತಾರವಾಗಲೇಬೇಕಾಗಿರುವುದು ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಅಮೇಜಾನ್ ಕಂಪನಿ ಹೇಗೆ ಮಹಿಳಾ ಸ್ವ ಸಹಾಯ ಗಂಪುಗಳಿಗೆ ಅವಕಾಶಗಳನ್ನು ನೀಡುತ್ತದೆಯೋ ಈ ರೀತಿಯ ಬೆಂಬಲ ಇಂದು ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ತಿಕವಾಗ ಸಬಲರಾಗುವ ದೃಷ್ಟಿಯ ಹಿನ್ನೆಲೆಯಲ್ಲಿ ನಾವು ಸಾಂಸ್ಕøತಿಕ ಬದಲಾವಣೆಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಇದೊಂದು ದಿಟ್ಟ ನಿರ್ಧಾರವಾಗಿದೆ. ವ್ಯಾಪಾರದ ಸಂಸ್ಕøತಿ, ಬ್ರ್ಯಾಂಡಂಗ್, ಉತ್ಪನ್ನಗಳ ಗುಣಮಟ್ಟ ಸುಧಾರಣೆಯ ಸಂಸ್ಕøತಿಯನ್ನು ಕಲಿಯವ ಅವಶ್ಯಕತೆ ಇದೆ. ರಾಜ್ಯ ಸರಕಾರ ಹಾಗೂ ಅಮೆಜಾನ್ ಈ ಕಾರ್ಯದಲ್ಲಿ ಗುರುತರವಾದ ಕಾರ್ಯ ಮಾಡಬೇಕಿದೆ. ಗುಣಮಟ್ಟ ಸುಧಾರಣೆಯಲ್ಲಿ ಮುಖ್ಯ ವಾಹಿನಿಗೆ ಬರಬೇಕಿದೆ. ಮಾರುಕಟ್ಟೆಯಲ್ಲಿ ಉತ್ಪನ್ನಗಳ ಗುಣಮಟ್ಟ ವೃದ್ಧಿಯಾಗದಿದರೆ ಉದ್ಯಮ ಸುಸ್ಥಿರವಾಗಲು ಸಾಧ್ಯವಿಲ್ಲ. ಹಾಗಾಗಿ ಇಂದಿನ ದಿನಮಾನಗಲ್ಲಿ ಈ ಬದಲಾವಣೆಗಳು ಬಹುಮುಖ್ಯವಾಗಿವೆ ಎಂದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ, ಐಟಿ, ಬಿಟಿ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಅಮೆಜಾನ್ ಕಂಪೆನಿಯ ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.